Advertisement

ಟಿ-20: 250 ರನ್‌ ಸಿಡಿಸಿ ದಾಖಲೆ ಬರೆದ ಇಂಗ್ಲೆಂಡ್‌ ವನಿತೆಯರು!

04:50 PM Jun 21, 2018 | |

ಲಂಡನ್‌: ಇಂಗ್ಲೆಂಡ್‌ ಪುರುಷರ ಕ್ರಿಕೆಟ್‌ ತಂಡ 481 ರನ್‌ಗಳ ದಾಖಲೆ ಮೊತ್ತ ಪೇರಿಸಿ ಐತಿಹಾಸಿಕ ಜಯ ದಾಖಲಿಸಿದ 2 ದಿನಗಳ ಬೆನ್ನಲ್ಲೇ ಇಂಗ್ಲೆಂಡ್‌ ಮಹಿಳಾ ತಂಡ ಟಿ-20ಯಲ್ಲಿ  250 ರನ್‌ಗಳನ್ನು ಕಲೆ ಹಾಕಿ ಹೊಸ ದಾಖಲೆ ಬರೆದಿದೆ. 

Advertisement

ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್‌ ನಡುವಿನ ತ್ರಿಕೋನ ಸರಣಿಯಲ್ಲಿ ಸತತ ದಾಖಲೆಗಳು ಒಂದೇ ದಿನ ನಿರ್ಮಾಣವಾಗಿದೆ.

ಮೊದಲು ನಡೆದ ಪಂದ್ಯಾವಳಿಯಲ್ಲಿ  ನ್ಯೂಜಿಲ್ಯಾಂಡ್‌ 20 ಓವರ್‌ಗಳಲ್ಲಿ  1 ವಿಕೆಟ್‌ ನಷ್ಟಕ್ಕೆ 216 ರನ್‌ ಪೇರಿಸಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ  ಆಫ್ರಿಕಾ 6 ವಿಕೆಟ್‌ ನಷ್ಟಕ್ಕೆ 150 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲ್ಯಾಂಡ್‌ 66 ರನ್‌ಗಳ ಜಯ ಗಳಿಸಿತು.

ಇನ್ನೊಂದು ಪಂದ್ಯದಲ್ಲಿ  ಸಿಡಿದೆದ್ದ ಇಂಗ್ಲೆಂಡ್‌ ವನಿತೆಯರು 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 250 ರನ್‌ ಕಲೆ ಹಾಕಿ ಮಹಿಳಾ ಟಿ-20 ಗರಿಷ್ಠ ಸ್ಕೋರ್‌ ದಾಖಲೆ ನಿರ್ಮಿಸಿದರು. 

ಮೊದಲೆ ಸೋತು ಹೋಗಿದ್ದ  ದಕ್ಷಿಣ ಆಫ್ರಿಕಾ ಗುರಿ ಬೆನ್ನಟ್ಟಿ   6  ವಿಕೆಟ್‌ ಕಳೆದುಕೊಂಡು 129 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಇಂಗ್ಲೆಂಡ್‌ 121 ರನ್‌ಗಳ ಐತಿಹಾಸಿಕ ಜಯ ದಾಖಲಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next