Advertisement

ನೀರಸ ಡ್ರಾನಲ್ಲಿ ಅಂತ್ಯವಾದ ಇಂಗ್ಲೆಂಡ್-ನ್ಯೂಜಿಲ್ಯಾಂಡ್ ಮೊದಲ ಟೆಸ್ಟ್

08:27 AM Jun 07, 2021 | Team Udayavani |

ಲಾರ್ಡ್ಸ್: ಇಂಗ್ಲೆಂಡ್ ಬೇಸಿಗೆಯ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮೂರನೇ ದಿನದ ಮಳೆಯ ಕಾರಣ ನಿಖರ ಫಲಿತಾಂಶ ಲಭ್ಯವಾಗಿಲ್ಲ.

Advertisement

ನಾಲ್ಕನೇ ದಿನದ ಅಂತ್ಯಕ್ಕೆ 67 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಐದನೇ ದಿನದಲ್ಲಿ ಸತತ ವಿಕೆಟ್ ಕಳೆದುಕೊಂಡಿತು. ಟೇಲರ್ 33, ನಿಕೋಲ್ಸ್ 23 ರನ್ ಗಳಿಸಿದರು. 169 ರನ್ ಗೆ ಆರು ವಿಕೆಟ್ ಕಳೆದುಕೊಂಡಿದ್ದಾಗ ಕಿವೀಸ್ ಡಿಕ್ಲೇರ್ ಘೋಷಣೆ ಮಾಡಿದರು.

ಇದನ್ನೂ ಓದಿ:ನಾಸಾ ಚಂದ್ರಯಾನಕ್ಕೆ ಭಾರತೀಯ ಮೂಲದ ಎಂಜಿನಿಯರ್‌ ಸುಭಾಷಿಣಿ ಅಯ್ಯರ್‌ ಬಲ

ಗುರಿ ಬೆನ್ನತ್ತಿದ ಇಂಗ್ಲೆಂಡ್ ಗೆ  ಡಾಮ್ ಸಿಬ್ಲಿ ಆಸರೆಯಾದರು. ಸಿಬ್ಲಿ ಅಜೇಯ 60 ರನ್ ಬಾರಸಿದರೆ ರೂಟ್ 40 ರನ್ ಗಳಿಸಿದರು. ಕಿವೀಸ್ ಬೌಲರ್ ಗಳು ವಿಕೆಟ್ ಉರುಳಿಸಲು ಸತತ ಪ್ರಯತ್ನ ಪಟ್ಟರೂ ಕೇವಲ ಮೂರು ವಿಕೆಟ್ ಪಡೆಯಲು ಮಾತ್ರ ಸಾಧ್ಯವಾದರು. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

ನ್ಯೂ: 378 ಮತ್ತು 169-6

Advertisement

ಇಂ: 275 ಮತ್ತು 170-3

Advertisement

Udayavani is now on Telegram. Click here to join our channel and stay updated with the latest news.

Next