ಎಜ್‌ಬಾಸ್ಟನ್: ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ಗೆಲ್ಲುವ ಅಪೂರ್ವ ಅವಕಾಶವನ್ನು ಭಾರತ ತಂಡ ಕೈ ಚೆಲ್ಲಿದ್ದು, 31 ರನ್‌ಗಳ ಅಂತರದಿಂದ ಜಯಭೇರಿ ಬಾರಿಸಿರುವ ಆತಿಥೇಯ ಇಂಗ್ಲೆಂಡ್ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
4 ನೇ ದಿನದಾಟದಲ್ಲಿ 2ನೇ ಇನಿಂಗ್ಸ್‌ನಲ್ಲಿ ಗೆಲ್ಲಲು 194 ರನ್ ಗುರಿ ಬೆನ್ನಟ್ಟಿದ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 162 ರನ್‌ಗಳಿಗೆ ಆಲೌಟಾಗಿ ಆಂಗ್ಲರಿಗೆ ಶರಣಾಯಿತು. 43 ರನ್‌ಗಳಿಸಿ ಕ್ರೀಸ್‌ನಲ್ಲಿದ್ದ ನಾಯಕ
ಕೊಹ್ಲಿ 51 ಕ್ಕೆ ಎಲ್‌ಬಿಗೆ ಬಲಿಯಾಗುವ ಮೂಲಕ ಭಾರತಕ್ಕೆ ಭಾರೀ ಹೊಡೆತವಾಯಿತು. ಬಹುತೇಕರು ಗೆಲುವಿನ ಆಸೆಯನ್ನೂ ಕೈ ಚೆಲ್ಲಿದರು. ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ (149 )ಕಪ್ತಾನನ ಆಟ ಪ್ರದರ್ಶಿಸಿದ್ದರು.
ದಿನೇಶ್ ಕಾರ್ತಿಕ್ ಕೂಡ 20 ರನ್‌ಗೆ ಆಟ ಮುಗಿಸಿದರು. ಬಾಲದಲ್ಲಿ ಬಲವಿದೆ ಎನ್ನುವ ಮಾತಿನಂತೆ ಗೆಲುವಿನ ಆಸೆ ಮೂಡಿಸಿದ ಹಾರ್ದಿಕ್ ಪಾಂಡ್ಯ ತನ್ನೆಲ್ಲಾ ಪ್ರಯತ್ನ ಮಾಡಿದರೂ 31 ರನ್‌ಗೆ ನಿರ್ಗಮಿಸಬೇಕಾಯಿತು. ಇಶಾಂತ್ ಶರ್ಮಾ 11 ರನ್ ಗಳಿಸಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. 162 ರನ್‌ಗಳಿಗೆ ಆಲೌಟಾದ ಕೊಹ್ಲಿ ಪಡೆ ಸೋಲು ಅನುಭವಿಸಬೇಕಾಯಿತು.
ಬಿಗಿ ದಾಳಿ ನಡೆಸಿದ ವೇಗಿ ಬೆನ್ ಸ್ಟೋಕ್ಸ್ 4 ವಿಕೆಟ್ ಕಿತ್ತರು. ಕೊಹ್ಲಿ, ಪಾಂಡ್ಯಾ ,ಶಮಿ ಅವರನ್ನು ಇಂದಿನ ದಿನದಾಟದಲ್ಲಿ ಪೆವಿಲಿಯನ್‌ಗೆ ಕಳುಹಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಸ್ಕೋರ್ ಪಟ್ಟಿ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 287 ಆಲೌಟ್ , 2ನೇ ಇನಿಂಗ್ಸ್ 180 ಆಲೌಟ್
ಭಾರತ ಮೊದಲ ಇನ್ನಿಂಗ್ಸ್ 274 ಆಲೌಟ್, 2 ನೇ ಇನ್ನಿಂಗ್ಸ್ 162 ಕ್ಕೆ ಆಲೌಟ್