Advertisement

ಇಂಗ್ಲೆಂಡ್‌ Visa ಭಾರತೀಯರಿಗೆ ಗರಿಷ್ಠ

12:33 AM May 26, 2023 | Team Udayavani |

ಲಂಡನ್‌: ಕಳೆದ ವರ್ಷ ಇಂಗ್ಲೆಂಡ್‌ನ‌ ಗರಿಷ್ಠ ವೀಸಾಗಳನ್ನು ಯಾವ ದೇಶಕ್ಕೆ ಕೊಟ್ಟಿರಬಹುದು? ಅದೂ ಕುಶಲ ಕೆಲಸಗಾರರು ಮತ್ತು ವಿದ್ಯಾರ್ಥಿಗಳ ವಿಭಾಗದಲ್ಲಿ? ನಿಮ್ಮ ಊಹೆ ಸರಿಯಿದೆ. ಭಾರತಕ್ಕೆ ಗರಿಷ್ಠ ಪಾಲು ಸಿಕ್ಕಿದೆ. ಇಂಗ್ಲೆಂಡ್‌ನ‌ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳ ಪ್ರಕಾರ ಆರೋಗ್ಯ ಕ್ಷೇತ್ರದಲ್ಲಿ ಗರಿಷ್ಠ ಮಂದಿಗೆ ಇಂಗ್ಲೆಂಡ್‌ನ‌ಲ್ಲಿ ಕೆಲಸ ಸಿಕ್ಕಿದೆ. ಸಹಜವಾಗಿ ಇದರ ಲಾಭ ಭಾರತೀಯರಿಗೆ ದಕ್ಕಿದೆ. ಆರೋಗ್ಯ ಕ್ಷೇತ್ರದಲ್ಲಿ ಶೇ.33 ವೀಸಾ ಭಾರತೀಯರಿಗೆ ಸಿಕ್ಕಿವೆ, ಇನ್ನೂ ಪದವೀಧರ ವಿದ್ಯಾರ್ಥಿ ವೀಸಾಗಳಲ್ಲಿ ಭಾರತೀಯರ ಪಾಲು ಶೇ.41. ವರ್ಷದಿಂದ ವರ್ಷಕ್ಕೆ ಭಾರ ತೀಯರಿಗೆ ಸಿಗುವ ವೀಸಾ ಪ್ರಮಾಣ ಹೆಚ್ಚುತ್ತಲೇ ಇದೆ ಎನ್ನುವುದು ಗಮನಾರ್ಹ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next