Advertisement

ತಂದೆಯಾದ ಡು ಪ್ಲೆಸಿಸ್‌:ಲಾರ್ಡ್ಸ್‌ ಟೆಸ್ಟ್‌ ಪಂದ್ಯಕ್ಕಿಲ್ಲ

03:45 AM Jul 04, 2017 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಟೆಸ್ಟ್‌ ತಂಡದ ನಾಯಕ ಫಾ ಡು ಪ್ಲೆಸಿಸ್‌ ತಂದೆಯಾದ ಸಂಭ್ರಮದಲ್ಲಿದ್ದಾರೆ. ಈ ಕಾರಣದಿಂದಾಗಿ ಅವರು ಗುರುವಾರದಿಂದ ಲಾರ್ಡ್ಸ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಂಡದ ಪ್ರಕಟನೆ ತಿಳಿಸಿದೆ.

Advertisement

ಡು ಪ್ಲೆಸಿಸ್‌ ಅವರ ಪತ್ನಿ ಇಮಾರಿ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ದಂಪತಿಗೆ ಇದು ಮೊದಲ ಮಗುವಿನ ಸಂಭ್ರಮದ ಕ್ಷಣ. ಹೀಗಾಗಿ ಡು ಪ್ಲೆಸಿಸ್‌ ಇನ್ನೂ ಕೆಲವು ದಿನ ದಕ್ಷಿಣ ಆಫ್ರಿಕಾದಲ್ಲೇ ಉಳಿಯಲಿದ್ದಾರೆ. ಡು ಪ್ಲೆಸಿಸ್‌ ಗೈರಲ್ಲಿ ಡೀನ್‌ ಎಲ್ಗರ್‌ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

ಇನ್ನೊಂದೆಡೆ, ರಸ್ತೆ ಅಪಘಾತಕ್ಕೆ ಸಿಲುಕಿದ ತಾಯಿಯನ್ನು ಕಾಣಲು ಒಂದು ವಾರದ ಹಿಂದೆ ತವರಿಗೆ ದೌಡಾಯಿಸಿದ ಪ್ರಧಾನ ಕೋಚ್‌ ರಸೆಲ್‌ ಡೊಮಿಂಗೊ ಲಂಡನ್ನಿಗೆ ವಾಪಸಾಗಿದ್ದಾರೆ. ಡೊಮಿಂಗೊ ಅವರ ತಾಯಿ ಈಗ ಸುರಕ್ಷಿತವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next