Advertisement

Paris Games: ಪದಕ ಗೆದ್ದ ಇಂಗ್ಲೆಂಡ್‌ ಈಜುಪಟುವಿಗೆ ಕೊರೊನಾ!

12:12 AM Jul 31, 2024 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕೊರೊನಾ ಕೂಡ ತನ್ನ ಉಪಸ್ಥಿತಿಯನ್ನು ಸಾರಿದೆ. ಬ್ರೆಸ್ಟ್‌ ಸ್ಟ್ರೋಕ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಇಂಗ್ಲೆಂಡ್‌ನ‌ ಈಜುಪಟು ಆ್ಯಡಂ ಪೀಟಿ ಅವರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಪದಕ ಗೆದ್ದ ಒಂದೇ ದಿನದಲ್ಲಿ ಇದು ಸಾಬೀತಾಗಿದೆ.

Advertisement

ಗ್ರೇಟ್‌ ಬ್ರಿಟನ್‌ ತಂಡ ನೀಡಿದ ಮಾಹಿತಿಯಂತೆ, ಪದಕ ಗೆದ್ದ ಬಳಿಕ ಪೀಟಿ ಆರೋಗ್ಯದಲ್ಲಿ ಏರುಪೇರಾಗಿತ್ತು. ತಡರಾತ್ರಿ ಆರೋಗ್ಯ ಇನ್ನಷ್ಟು ಹದಗೆಟ್ಟ ಪರಿಣಾಮ ಕೊರೊನಾ ಟೆಸ್ಟ್‌ ನಡೆಸಲಾಗಿತ್ತು. ಆಗ ಪಾಸಿಟಿವ್‌ ಫ‌ಲಿತಾಂಶ ಬಂದಿತ್ತು.

ಆ್ಯಡಂ ಪೀಟಿ ಸತತ 3 ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದ ಅಪರೂಪದ ಸಾಧನೆಗೈದಿದ್ದರು. 8 ಬಾರಿ ವಿಶ್ವ ಚಾಂಪಿ ಯನ್‌, 16 ಸಲ ಯುರೋಪಿಯನ್‌ ಚಾಂಪಿಯನ್‌, 4 ಸಲ ಕಾಮನ್ವೆಲ್ತ್‌ ಚಾಂಪಿಯನ್‌ ಕೂಡ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next