Advertisement

ಲಾರ್ಡ್ಸ್‌ ಅಂಗಳದಲ್ಲಿ ಇಂದಿನಿಂದ ಇಂಗ್ಲೆಂಡ್‌-ಕಿವೀಸ್‌ ಟೆಸ್ಟ್‌ ಪಂದ್ಯಾಟ ಆರಂಭ

12:10 AM Jun 02, 2021 | Team Udayavani |

ಲಂಡನ್‌ : 2021-22ರ ಅಂತಾರಾಷ್ಟ್ರೀಯ ಟೆಸ್ಟ್‌ ಋತುವಿಗೆ ಕ್ರಿಕೆಟಿನ ಮಹೋನ್ನತ ಅಂಗಳವಾದ ಲಾರ್ಡ್ಸ್‌ನ ಹೆಬ್ಟಾಗಿಲು ತೆರೆಯಲಿದೆ. ಇಂಗ್ಲೆಂಡ್‌ ಮತ್ತು ಪ್ರವಾಸಿ ನ್ಯೂಜಿಲ್ಯಾಂಡ್‌ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯ ಬುಧವಾರ ಇಲ್ಲಿ ಆರಂಭವಾಗಲಿದೆ.

Advertisement

ಇದು 2019ರ ಆ್ಯಶಸ್‌ ಸರಣಿಯ ಬಳಿಕ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯವೆಂಬುದು ವಿಶೇಷ. ದಿನಂಪ್ರತಿ ಎಂಟು ಸಾವಿರ ವೀಕ್ಷಕರಿಗೆ ಪ್ರವೇಶಾವಕಾಶ ಇರುವುದರಿಂದ ಈ ಪಂದ್ಯ ಇನ್ನಷ್ಟು ರಂಗೇರಿಸಿಕೊಳ್ಳಲಿದೆ.

2020ರಲ್ಲಿ ಲಾರ್ಡ್ಸ್‌ನಲ್ಲಿ ಯಾವುದೇ ಟೆಸ್ಟ್‌ ಪಂದ್ಯ ನಡೆಯದಿದ್ದುದು ದೊಡ್ಡ ಸುದ್ದಿಯಾಗಿತ್ತು. 1970ರ ಬಳಿಕ ಇಂಗ್ಲೆಂಡ್‌ ಇಲ್ಲಿ ಟೆಸ್ಟ್‌ ಆಡದ ಮೊದಲ ನಿದರ್ಶನ ಇದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next