Advertisement

ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಜಾಕ್‌ ಲೀಚ್‌

06:00 AM Mar 17, 2018 | Team Udayavani |

ಲಂಡನ್‌: ನ್ಯೂಜಿಲ್ಯಾಂಡ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಬೌಲರ್‌ ಜಾಕ್‌ ಲೀಚ್‌ ಇಂಗ್ಲೆಂಡ್‌ ತಂಡಕ್ಕೆ ಕರೆ ಪಡೆದಿದ್ದಾರೆ. ಅವರು ಗಾಯಾಳು ಲೆಗ್‌ ಸ್ಪಿನ್ನರ್‌ ಮಾಸನ್‌ ಕ್ರೇನ್‌ ಜಾಗವನ್ನು ತುಂಬಲಿದ್ದಾರೆ. ಕ್ರೇನ್‌ ತವರಿಗೆ ವಾಪಸಾಗಲಿದ್ದಾರೆ ಎಂದು ಇಂಗ್ಲೆಂಡ್‌ ಬೌಲಿಂಗ್‌ ಕೋಚ್‌ ಕ್ರಿಸ್‌ ಸಿಲ್ವರ್‌ವುಡ್‌ ಹೇಳಿದ್ದಾರೆ.

Advertisement

ಎಡಗೈ ಸ್ಪಿನ್ನರ್‌ ಆಗಿರುವ ಜಾಕ್‌ ಲೀಚ್‌ ಕಳೆದ ವೆಸ್ಟ್‌ ಇಂಡೀಸ್‌ ಎ ವಿರುದ್ಧದ ಅನಧಿಕೃತ ಟೆಸ್ಟ್‌ ಸರಣಿ ಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್‌ ಎ ಪರ ಆಡಿದ 3 ಟೆಸ್ಟ್‌ಗಳಲ್ಲಿ 17 ವಿಕೆಟ್‌ ಉಡಾಯಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಲೀಚ್‌ ಸಾಧನೆ ಉಲ್ಲೇಖನೀಯ.  

ನ್ಯೂಜಿಲ್ಯಾಂಡ್‌ – ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯ ಮಾ. 22ರಿಂದ ಆಕ್ಲೆಂಡ್‌ನ‌ಲ್ಲಿ ಆರಂಭವಾಗಲಿದೆ. ಇದು ನ್ಯೂಜಿ ಲ್ಯಾಂಡಿನಲ್ಲಿ ನಡೆಯುವ ಮೊದಲ ಡೇ-ನೈಟ್‌ ಟೆಸ್ಟ್‌ ಪಂದ್ಯ ವೆಂಬುದು ವಿಶೇಷ. 

Advertisement

Udayavani is now on Telegram. Click here to join our channel and stay updated with the latest news.

Next