Advertisement

WPL: ಬೆಂಗಳೂರು ವನಿತಾ ತಂಡದ ಪಾಲಾದ ಇಂಗ್ಲೆಂಡ್‌ ಆಲ್‌ ರೌಂಡರ್‌ ವ್ಯಾಟ್

01:21 PM Oct 31, 2024 | Team Udayavani |

ಬೆಂಗಳೂರು: ಒಂದೆಡೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ ಮೆಗಾ ಹರಾಜಿಗೆ ಎಲ್ಲಾ ತಂಡಗಳು ಸಿದ್ದತೆ ನಡೆಸುತ್ತಿದ್ದರೆ, ಮತ್ತೊಂದೆಡೆ ವನಿತಾ ಪ್ರೀಮಿಯರ್‌ ಲೀಗ್‌ ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ತನ್ನ ತಂಡ ಬಲಿಷ್ಠ ಮಾಡಿಕೊಳ್ಳುತ್ತಿದೆ.

Advertisement

ಇಂಗ್ಲೆಂಡ್‌ ಮಹಿಳಾ ತಂಡದ ಪ್ರಮುಖ ಆಲ್‌ ರೌಂಡರ್‌ ಡೇನಿಯಲ್‌ ವ್ಯಾಟ್‌, ಮಹಿಳಾ ಆರ್‌ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಯುಪಿ ವಾರಿಯರ್ ತಂಡದಲ್ಲಿದ್ದ ವ್ಯಾಟ್‌, ನಗದು ಮಾರಾಟದ ಮೂಲಕ ಹಾಲಿ ಚಾಂಪಿಯನ್ಸ್‌ ಆರ್‌ಸಿಬಿ ಪಾಲಾಗಿದ್ದಾರೆ.

ಅಗ್ರ ಕ್ರಮಾಂಕದ ಬ್ಯಾಟರ್ 30 ಲಕ್ಷ ರೂಪಾಯಿ ಶುಲ್ಕಕ್ಕೆ ಆರ್‌ ಸಿಬಿ ಪಾಲಾಗಿದ್ದಾರೆ. ವ್ಯಾಟ್ ಟೂರ್ನಮೆಂಟ್‌ನ ಉದ್ಘಾಟನಾ ಆವೃತ್ತಿಯಲ್ಲಿ ಮಾರಾಟವಾಗದೆ ಉಳಿದಿದ್ದರು. ಆದರೆ 2024 ರಲ್ಲಿ ವಾರಿಯರ್ಜ್‌ ತಂಡಕ್ಕೆ ಸೇರಿಕೊಂಡರು. ಆದರೆ, ಅವರು ಪ್ರಮುಖ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಚಾಮರಿ ಅಥಾಪತ್ತು ಮತ್ತು ಅಲಿಸ್ಸಾ ಹೀಲಿ ಅವರ ಉಪಸ್ಥಿತಿಯಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

33 ವರ್ಷದ ವ್ಯಾಟ್‌, 164 ಅಂತಾ ರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 2979 ರನ್‌, 46 ವಿಕೆಟ್‌ ಸಾಧನೆ ಹೊಂದಿದ್ದಾರೆ. ವ್ಯಾಟ್‌ ಸೇರ್ಪಡೆಯಿಂದ ಸ್ಮತಿ ಮಂಧನಾ ನಾಯಕತ್ವದ ಆರ್‌ಸಿಬಿಗೀಗ ಇನ್ನಷ್ಟ ಬಲ ಬಂದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next