Advertisement
ಐಸಿಸಿ ಅಭಿನಂದನೆ: ಈ ಐತಿಹಾಸಿಕ ಸಂದರ್ಭದಲ್ಲಿ ಕ್ರಿಕೆಟಿನ ಮಾತೃ ಸಂಸ್ಥೆ “ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್’ (ಐಸಿಸಿ) ಇಂಗ್ಲೆಂಡ್ ಕ್ರಿಕೆಟಿಗೆ ಶುಭಾಶಯ ಸಲ್ಲಿಸಿ ಅಭಿನಂದಿಸಿದೆ. “1000ನೇ ಟೆಸ್ಟ್ ಪಂದ್ಯ ಆಡುತ್ತಿರುವ ಇಂಗ್ಲೆಂಡಿಗೆ ವಿಶ್ವ ಕ್ರಿಕೆಟ್ ಕುಟುಂಬದ ಪರವಾಗಿ ಅಭಿನಂದನೆಗಳು. ಇಂಗ್ಲೆಂಡ್ ಜಾಗತಿಕ ಕ್ರಿಕೆಟ್‌ನಲ್ಲಿ ಇಂಥದೊಂದು ಮೈಲುಗಲ್ಲು ನೆಡುತ್ತಿರುವ ಮೊದಲ ದೇಶವೆಂಬುದು ವಿಶೇಷ’ ಎಂದು ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ತಮ್ಮ ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ.
ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಸರಳ ಸಮಾರಂಭವೊಂದರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಅವರಿಗೆ ಬೆಳ್ಳಿ ಸ್ಮರಣಿಕೆಯಿಂದನ್ನು ಉಡುಗೊರೆಯಾಗಿ ನೀಡಲಾಯಿತು. ಐಸಿಸಿ ಪರವಾಗಿ ಈ ಸ್ಮರಣಿಕೆಯನ್ನು ಮ್ಯಾಚ್ ರೆಫ್ರಿ, ನ್ಯೂಜಿಲ್ಯಾಂಡಿನ ಮಾಜಿ ನಾಯಕ ಜೆಫ್ ಕ್ರೋವ್ ಪ್ರದಾನ ಮಾಡಿದರು.
Related Articles
ಇಂಗ್ಲೆಂಡ್ ಟೆಸ್ಟ್ ಕ್ರಿಕೆಟಿನ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾಗುತ್ತಿರುವುದು ಭಾರತದ ಪಾಲಿನ ಹೆಗ್ಗಳಿಕೆ. 2011ರ ಇಂಗ್ಲೆಂಡ್ ಪ್ರವಾಸದ ವೇಳೆಯೂ ಭಾರತ ಇಂಥದೇ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಅಂದು ಲಾರ್ಡ್ಸ್‌ನಲ್ಲಿ ಟೆಸ್ಟ್ ಇತಿಹಾಸದ 2000ದ ಪಂದ್ಯವನ್ನು ಆಡಲಾಗಿತ್ತು. ಬುಧವಾರ ಭಾರತ-ಇಂಗ್ಲೆಂಡ್ ನಡುವೆ ನಡೆದ ಟೆಸ್ಟ್ ಇತಿಹಾಸದ 2,314ನೇ ಪಂದ್ಯ.
Advertisement
999 ಟೆಸ್ಟ್ ಸಾಧನೆ1877ರ ಮಾರ್ಚ್ ತಿಂಗಳಲ್ಲಿ ಆತಿಥೇಯ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಇತಿಹಾಸದ ಪ್ರಪ್ರಥಮ ಪಂದ್ಯ ನಡೆದಿತ್ತು. ಈವರೆಗಿನ 999 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ 357 ಪಂದ್ಯಗಳನ್ನು ಜಯಿಸಿದ್ದು, 297ರಲ್ಲಿ ಸೋಲನುಭವಿಸಿದೆ. 345 ಪಂದ್ಯಗಳು ಡ್ರಾಗೊಂಡಿವೆ.
ಐತಿಹಾಸಿಕ ಎಜ್‌ಬಾಸ್ಟನ್ ಅಂಗಳದಲ್ಲಿ ಇಂಗ್ಲೆಂಡ್ ಆಡುತ್ತಿರುವ 51ನೇ ಟೆಸ್ಟ್ ಇದಾಗಿದೆ. ಇಲ್ಲಿ 1902ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಆಡಿದ್ದ ಇಂಗ್ಲೆಂಡ್, 27ರಲ್ಲಿ ಜಯ ಸಾಧಿಸಿದೆ. ಎಂಟರಲ್ಲಿ ಸೋತಿದೆ. ಉಳಿದ 15 ಟೆಸ್ಟ್‌ಗಳು ಡ್ರಾ ಆಗಿವೆ. ಭಾರತ-ಇಂಗ್ಲೆಂಡ್ ನಂಟು
ಭಾರತ ತನ್ನ ಟೆಸ್ಟ್ ಇತಿಹಾಸದ ಪ್ರಥಮ ಪಂದ್ಯವನ್ನು 1932ರಲ್ಲಿ ಇಂಗ್ಲೆಂಡ್ ವಿರುದ್ಧವೇ ಆಡಿತ್ತು. ಈವರೆಗೆ ಇತ್ತಂಡಗಳ ನಡುವೆ 117 ಟೆಸ್ಟ್ ಪಂದ್ಯಗಳು ನಡೆದಿವೆ. 25ರಲ್ಲಿ ಗೆದ್ದಿರುವ ಭಾರತ, 43ರಲ್ಲಿ ಸೋಲನುಭವಿಸಿದೆ. ಉಳಿದವು ಡ್ರಾಗೊಂಡಿವೆ.
ತವರಿನಂಗಳದಲ್ಲಿ ಭಾರತದ ವಿರುದ್ಧ 30 ಟೆಸ್ಟ್ ಗೆದ್ದಿರುವ ಇಂಗ್ಲೆಂಡ್, ಆರರಲ್ಲಷ್ಟೇ ಸೋತಿದೆ. 21 ಪಂದ್ಯ ಡ್ರಾ ಫಲಿತಾಂಶ ದಾಖಲಿಸಿವೆ. ಎಜ್‌ಬಾಸ್ಟನ್‌ನಲ್ಲಿ ಭಾರತ-ಇಂಗ್ಲೆಂಡ್ ನಡುವೆ 6 ಟೆಸ್ಟ್‌ಗಳನ್ನು ಆಡಲಾಗಿದ್ದು, ಇಂಗ್ಲೆಂಡ್ 5-0 ಗೆಲುವಿನ ದಾಖಲೆ ಹೊಂದಿದೆ. ಇಂಗ್ಲೆಂಡಿನ -ಟಾಪ್ 5 ಬ್ಯಾಟ್ಸ್‌ಮನ್ ಬ್ಯಾಟ್ಸ್‌ಮನ್ ರನ್
1. ಅಲಸ್ಟೇರ್ ಕುಕ್ 12,145
2. ಗ್ರಹಾಂ ಗೂಚ್ 8,900
3. ಅಲೆಕ್ ಸ್ಟುವರ್ಟ್ 8,463
4. ಡೇವಿಡ್ ಗೋವರ್ 8,231
5. ಕೆವಿನ್ ಪೀಟರ್‌ಸನ್ 8,181 ಇಂಗ್ಲೆಂಡಿನ ಟಾಪ್ 5 ಬೌಲರ್
ಬೌಲರ್ ವಿಕೆಟ್
1. ಜೇಮ್ಸ್ ಆ್ಯಂಡರ್ಸನ್ 540
2. ಸ್ಟುವರ್ಟ್ ಬ್ರಾಡ್ 417
3 ಇಯಾನ್ ಬೋಥಂ 383
4. ಬಾಬ್ ವಿಲ್ಲೀಸ್ 325
5. ಫ್ರೆಡ್ ಟ್ರೂಮನ್ 307