Advertisement

ಇಂಗ್ಲೆಂಡ್‌-ಪಾಕಿಸ್ಥಾನ ದ್ವಿತೀಯ ಟೆಸ್ಟ್‌ ನೀರಸ ಡ್ರಾ

10:03 PM Aug 18, 2020 | mahesh |

ಸೌತಾಂಪ್ಟನ್: ಇಂಗ್ಲೆಂಡ್‌-ಪಾಕಿಸ್ಥಾನ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯ ಸತತ ಮಳೆ ಅಡಚಣೆಯಿಂದಾಗಿ ನಿರೀಕ್ಷೆಯಂತೆಯೇ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರಿಂದ ಇಂಗ್ಲೆಂಡ್‌ ತಂಡ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

Advertisement

ಪಂದ್ಯದ ಅಂತಿಮ ದಿನವೂ ಮಳೆ ಮತ್ತು ಮಂದ ಬೆಳಕಿನಿಂದ ಮೊದಲೆರಡು ಅವಧಿಯಲ್ಲಿ ಆಟ ನಡೆಯಲಿಲ್ಲ. ಅಂತಿಮ ಅವಧಿಯಲ್ಲಿ ಒಂದು ವಿಕೆಟಿಗೆ 7 ರನ್ನಿನಿಂದ ಇನ್ನಿಂಗ್ಸ್‌ ಮುಂದುವರಿಸಿದ ಇಂಗ್ಲೆಂಡ್‌, 4 ವಿಕೆಟಿಗೆ 110 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಅಲ್ಲಿಗೆ ಉಭಯ ತಂಡಗಳ ನಾಯಕರು ಪಂದ್ಯವನ್ನು ಡ್ರಾಗೊಳಿಸಲು ಒಪ್ಪಿಕೊಂಡರು. ಆಗ ನಾಯಕ ಜೋ ರೂಟ್‌ (9) ಮತ್ತು ಜಾಸ್‌ ಬಟ್ಲರ್‌ (0) ಕ್ರೀಸ್‌ನಲ್ಲಿದ್ದರು.

ಚಹಾ ವಿರಾಮದ ಬಳಿಕ ಆರಂಭಗೊಂಡ ಆಟದಲ್ಲಿ ಡೊಮಿನಿಕ್‌ ಸಿಬ್ಲಿ (32) ಮತ್ತು ಜಾಕ್‌ ಕ್ರಾಲಿ (53) 2ನೇ ವಿಕೆಟಿಗೆ 91 ರನ್‌ ಒಟ್ಟು ಸೇರಿಸಿದರು. ಕ್ರಾಲಿ ಅರ್ಧ ಶತಕ ಪೂರೈಸಿದ ಬಳಿಕ ವೇಗಿ ಮೊಹಮ್ಮದ್‌ ಅಬ್ಟಾಸ್‌ಗೆ ವಿಕೆಟ್‌ ಒಪ್ಪಿಸಿದರು.ಸರಣಿಯ 3ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಆ. 21ರಿಂದ 25ರ ವರೆಗೆ ಸೌತಾಂಪ್ಟನ್‌ನಲ್ಲೇ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ ಮೊದಲ ಇನ್ನಿಂಗ್ಸ್‌-236. ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌- 4 ವಿಕೆಟಿಗೆ 110 ಡಿಕ್ಲೇರ್‌ (ಸಿಬ್ಲಿ 32, ಕ್ರಾಲಿ 53, ರೂಟ್‌ ಔಟಾಗದೆ 9, ಮೊಹಮ್ಮದ್‌ ಅಬ್ಟಾಸ್‌ 28ಕ್ಕೆ 2, ಅಫ್ರಿದಿ 25ಕ್ಕೆ 1, ಯಾಶಿರ್‌ ಶಾ 30ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next