Advertisement
ವಿಜ್ಞಾನ – ತಂತ್ರಜ್ಞಾನ-ನಿಸರ್ಗ-ಸಮುದಾಯಗಳನ್ನು ಜೋಡಿಸುವ ವಿಶಿಷ್ಟ ಮಾಧ್ಯಮದ ಕೊಂಡಿಯೇ ಎಂಜಿನಿಯರ್ ವೃತ್ತಿ. ದೇಶ ಕಟ್ಟುವ ಎಂಜಿನಿಯರ್ ವೃತ್ತಿಗೆ ಗೌರವ ಸೂಚಿಸಲು ಹಾಗೂ ಭಾರತದ ಹೆಮ್ಮೆಯ ಎಂಜಿನಿಯರ್ ಪಿತಾಮಹ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸ್ಮರಣಾರ್ಥ ದಿನವೇ ಎಂಜಿನಿಯರ್ ದಿನ.
ಮೂಲಸೌಕರ್ಯ ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿ ಹೆಚ್ಚಿದ ಹೂಡಿಕೆಯಿಂದಾಗಿ ಭಾರತದ ಎಂಜಿನಿಯರಿಂಗ್ ಕ್ಷೇತ್ರವು ಕೆಲವು ವರ್ಷಗಳಿಂದ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಉತ್ಪಾದನಾ ಮತ್ತು ಮೂಲಸೌಕರ್ಯ ಕ್ಷೇತ್ರಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಈ ವಲಯವು ಭಾರತದ ಆರ್ಥಿಕ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿದೆ. ಜಾಗತಿಕ ಮಹಾಶಕ್ತಿಯಾಗಬೇಕೆಂಬ ಹಂಬಲದಲ್ಲಿ ಭಾರತ ತನ್ನ ಎಂಜಿನಿಯರಿಂಗ್ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ದಾಪುಗಾಲು ಹಾಕುತ್ತಿದ್ದು, ಎಂಜಿನಿಯರಿಂಗ್ ಸರಕುಗಳು, ಉತ್ಪನ್ನಗಳ ಮತ್ತು ಸೇವೆಗಳ ರಫ್ತುನ್ನು ಉತ್ತೇಜಿಸುವ ಉಸ್ತುವಾರಿ ವಹಿಸಲು ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿಯನ್ನು (ಇಇಪಿಸಿ) ಸರಕಾರ ರಚಿಸಿದೆ.
Related Articles
ದೇಶದಿಂದ ಹೆಚ್ಚಾಗಿ ಎಂಜಿನಿಯರಿಂಗ್ ವಸ್ತುಗಳು ಯುಎಸ್ ಮತ್ತು ಯುರೋಪಿಗೆ ರಫ್ತು ಆಗಲಿದ್ದು, ಇದರ ಒಟ್ಟು ರಫ್ತಿನ ಪ್ರಮಾಣ ಶೇ.60 ಕ್ಕಿಂತ ಹೆಚ್ಚಿದೆ. 2025ರ ವೇಳೆಗೆ ಭಾರತದಲ್ಲಿ ಎಂಜಿನಿಯರಿಂಗ್ ಸರಕು ಉತ್ಪನ್ನ ಕೈಗಾರಿಕಾ ಘಟಕ ಉದ್ಯಮದ ವಹಿವಾಟನ್ನು 8.05 ಲಕ್ಷ ಕೋಟಿ ರೂ.ಗಳಿಗೆ (115.17 ಬಿಲಿಯನ್ ಯುಎಸ್ ಡಾಲರ್) ಏರಿಸುವ ನಿರೀಕ್ಷೆಯಿದೆ.
Advertisement
ಭಾರತ ನಂ. ಒನ್
ಯುಎಸ್ ಮೂಲದ ನ್ಯಾಶನಲ್ ಸೈನ್ಸ್ಫೌಂ ಡೇಶನ್ ನಡೆಸಿದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಮೀಕ್ಷೆ ವರದಿ – 2018ರ ಪ್ರಕಾರ ಎಂಜಿನಿಯರಿಂಗ್ ಮತ್ತು ವಿಜ್ಞಾನ ಪದವೀಧರರನ್ನು ವಿಶ್ವಕ್ಕೆ ಕೊಡುಗೆ ನೀಡುವ ದೇಶಗಳ ಪೈಕಿ ಭಾರತ ಇಡೀ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ಪ್ರತಿ ವರ್ಷ ಶೇ.25ರಷ್ಟು ಎಂಜಿನಿಯರ್‌ಗಳನ್ನು ಭಾರತ ವಿಶ್ವಕ್ಕೆ ಕೊಡುಗೆ ನೀಡುತ್ತದೆ ಎಂದು ವರದಿ ಹೇಳಿದೆ. 38 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು
ಮಾನವ ಸಂಪನ್ಮೂಲ ಸಚಿವಾಲಯದ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (ಎಐಎಸ್‌ಎಚ್‌ಇ) 2019ರ ವರದಿಯ ಪ್ರಕಾರ ದೇಶಾದ್ಯಂತ ಸುಮಾರು 38.52 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರ್ ಪದವಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜತೆಗೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದ ಇತರ ಪದವಿ ವಿಭಾಗಗಳ ಪೈಕಿ ಎಂಜಿನಿಯರಿಂಗ್ ಪದವಿ ವಿಭಾಗ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ. 6,000: ಮಾನವ ಸಂಪನ್ಮೂಲ ಸಚಿವಾಲಯದ ಪ್ರಕಾರ, ಭಾರತದಲ್ಲಿ 6,214 ಎಂಜಿನಿಯ ರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಗಳು ಇವೆ. 15,00,000: ಪ್ರತಿವರ್ಷ 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪೂರೈಸಿ ಉದ್ಯೋಗ ಕ್ಷೇತ್ರಕ್ಕೆ ಪಾದಾರ್ಪಣೆ.