Advertisement

ವಡೋದರಾದಲ್ಲಿ 2654 ಕೋಟಿ ರೂ. ಹಗರಣ

09:35 AM Apr 11, 2018 | Team Udayavani |

ಅಹಮದಾಬಾದ್‌: ವಡೋದರಾ ಮೂಲದ ಡೈಮಂಡ್‌ ಪವರ್‌ ಇನ್‌ಫ್ರಾಸ್ಟ್ರಕ್ಚರ್‌ ವಿವಿಧ ಬ್ಯಾಂಕ್‌ಗಳಿಗೆ 2654 ಕೋಟಿ ರೂ. ಮೋಸ ಮಾಡಿದ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಂಪನಿಯ ವಿವಿಧ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಡಿಐಪಿಎಲ್‌ನ 17 ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಈಗಾಗಲೇ ಕಂಪನಿಯ ಸಂಸ್ಥಾಪಕ ಎಸ್‌ ಎನ್‌ ಭಟ್ನಾಗರ್‌ ಹಾಗೂ ಅವರ ಪುತ್ರ ಅಮಿತ್‌ ಮತ್ತು ಸುಮಿತ್‌ ಭಟ್ನಾಗರ್‌ ವಿರುದ್ಧ ತನಿಖೆ ನಡೆಸಲಾಗುತ್ತಿದೆ. 2008ರಿಂದ 11 ಬ್ಯಾಂಕ್‌ಗಳಿಂದ ಸಾಲ ಪಡೆದು ಮರುಪಾವತಿ ಮಾಡಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next