ಎಂಡೋ ಸಂತ್ರಸ್ತರ ನೋವು ಹಾಗೂ ತುಳುನಾಡಿನ ದೈವ ದೇವರ ಕಥೆಯನ್ನೊಳಗೊಂಡು ಸಿದ್ಧಗೊಳ್ಳುತ್ತಿರುವ ‘ಬಲಿಪೆ’ ತುಳುಚಿತ್ರದ ಚಿತ್ರೀಕರಣ ಕಾರ್ಯ ಅಂತಿಮ ಹಂತದಲ್ಲಿದ್ದು, ಅಕ್ಟೋಬರ್ ವೇಳೆಗೆ ತೆರೆಗೆ ಬರುವ ನಿರೀಕ್ಷೆ ಇದೆ. ಕೇರಳ ಸರಕಾರದಿಂದ ಎಂಡೋ ಸಂತ್ರಸ್ತರಿಗೆ ಯಾವ ರೀತಿ ಸೌಲಭ್ಯ ಸಿಗುತ್ತಿದೆ, ನಮ್ಮ ರಾಜ್ಯದಲ್ಲಿ ಹೇಗೆ ಅವರು ಕಡೆಗಣಿಸಲ್ಪಟ್ಟಿದ್ದಾರೆ ಎಂಬುದನ್ನು ಚಿತ್ರದಲ್ಲಿ ವಿವರಿಸಲಾಗಿದೆ.
‘ಬಲಿಪೆ’ ಎಂದರೆ ದೈವದ ವಾಹನವಾಗಿದ್ದು, ಬಲಿಷ್ಠ ಎಂಬ ಅರ್ಥವನ್ನು ನೀಡುತ್ತದೆ. ‘ಬಲಿಪೆ’ ಎಂಬ ಪ್ರಾಣಿಯು 100 ಹುಲಿಗಳ ಶಕ್ತಿಯನ್ನು ಹೊಂದಿದೆ ಎಂಬ ನಂಬಿಕೆ ಇದೆ. ಪ್ರಮುಖವಾಗಿ ಪೆರಾರ ಕ್ಷೇತ್ರ, ಎಕ್ಕಾರು, ಬಜ್ಪೆ, ಕತ್ತಲ್‌ಸಾರ್
ಮೊದಲಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ ಮೂರು ಹಾಡುಗಳಿವೆ.
ಹೇಮಂತ್ ಸುವರ್ಣ ಅವರು ಚಿತ್ರ ನಿರ್ಮಿಸಿದ್ದು, ಪ್ರಸಾದ್ ಅರ್ವ ನಿರ್ದೇಶನ ಮಾಡಿದ್ದಾರೆ. ಅರವಿಂದ ಬೋಳಾರ್, ರಂಜನ್ ಬೋಳೂರು ಹಾಸ್ಯ ಪಾತ್ರದಲ್ಲಿ ಮಿಂಚಿದ್ದು, ದಯಾನಂದ ಕತ್ತಲ್‌ಸಾರ್ ಕೂಡ ಪಾತ್ರ ನಿರ್ವಹಿಸಿದ್ದಾರೆ. ಹರ್ಷಿತ್ ಬಿ.ಸಿ. ರೋಡ್- ಅಂಕಿತಾ ಪಟ್ಲ ನಾಯಕ-ನಾಯಕಿಯರಾಗಿದ್ದು, ಐಶ್ವರ್ಯಾ ಆಚಾರ್ಯ, ದೃತಿ ಸಾಯಿ ಅಭಿನಯಿಸಿದ್ದಾರೆ.