Advertisement

16ನೇ ಲೋಕಸಭೆ ಅಧಿವೇಶನ ಮುಕ್ತಾಯ: 205 ಮಸೂದೆಗೆ ಅನುಮೋದನೆ

12:30 AM Feb 14, 2019 | |

ಹೊಸದಿಲ್ಲಿ: ಪ್ರಸ್ತುತ ಅವಧಿಯ ಅಂದರೆ, 2014 ರಿಂದ 2019ರ ವರೆಗೆ ನಡೆದ 16ನೇ ಲೋಕಸಭೆ ಕಲಾಪ ಬುಧವಾರ ಮುಕ್ತಾಯವಾಗಿದೆ. ಲೋಕಸಭೆ, ರಾಜ್ಯಸಭೆ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. 16ನೇ ಲೋಕಸಭೆ ಹಲವು ಮಹತ್ವಗಳನ್ನೂ ಹೊಂದಿದೆ. ಈ ಅವಧಿಯಲ್ಲಿ 205 ಮಸೂದೆಗಳಿಗೆ ಅನುಮೋದನೆ ಲಭ್ಯವಾಗಿದ್ದರೆ, 45 ಅಧ್ಯಾದೇಶಗಳನ್ನು ಹೊರಡಿಸಲಾಗಿದೆ. ದೇಶದಲ್ಲಿ ರೈತರ ಸಮಸ್ಯೆ, ಹಣದುಬ್ಬರ ಮತ್ತು ವಿವಿಧ ನೈಸರ್ಗಿಕ ವಿಪತ್ತುಗಳ ಸಹಿತ ಹಲವು ಅಂಶಗಳ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಿದೆ.

Advertisement

ಯುವ ಸಂಸದರೇ ಬೆಸ್ಟ್‌ !
ಮೊದಲ ಬಾರಿ ಆಯ್ಕೆಯಾದ 314 ಸಂಸದರು 311 ಪ್ರಶ್ನೆ ಕೇಳಿದ್ದಾರೆ. 72 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಮೂರು ಬಾರಿ ಆಯ್ಕೆಯಾದವರು ಅಧಿಕ ಸಂಖ್ಯೆಯ ಅಂದರೆ 335 ಪ್ರಶ್ನೆಗಳನ್ನು ಕೇಳಿದ್ದಾರೆ. ಯುವ ಸಂಸದರ ಭಾಗವಹಿಸುವಿಕೆ ಉತ್ತಮವಾಗಿದ್ದು, 40ಕ್ಕಿಂತ ಕಡಿಮೆ ವಯಸ್ಸಿನ ಸಂಸದರು ಶೇ. 7 ರಷ್ಟಿದ್ದಾರೆ. ಇವರು ಒಟ್ಟು 344 ಪ್ರಶ್ನೆಗಳನ್ನು ಕೇಳಿದ್ದಾರೆ. 40ರಿಂದ 70 ವರ್ಷದ ಸಂಸದರು ಕೇವಲ 45 ಚರ್ಚೆಯಲ್ಲಿ ಭಾಗವಹಿಸಿದ್ದರೆ, 70ಕ್ಕಿಂತ ಹೆಚ್ಚು ವಯಸ್ಸಿನ ಸಂಸದರು ಭಾಗವಹಿಸಿದ ಚರ್ಚೆಗಳ ಸಂಖ್ಯೆ ಇನ್ನೂ ಕಡಿಮೆ ಇದೆ.

ಮುಖ್ಯಾಂಶಗಳು
1,215 ಗಂಟೆಗಳ ಕಲಾಪ
ಶೇ.20ರಷ್ಟು ಹೆಚ್ಚು ಅವಧಿ: 15ನೇ ಲೋಕಸಭೆಗೆ ಹೋಲಿಸಿದರೆ
ಶೇ. 40ರಷ್ಟು ಕಡಿಮೆ ಅವಧಿ: ಸರಾಸರಿ ಲೋಕಸಭೆ ಕಾರ್ಯನಿರ್ವಹಣೆಗೆ ಹೋಲಿಸಿದರೆ
331 ದಿನ: ಅಧಿವೇಶನ ನಡೆದ ದಿನಗಳು
ಶೇ. 16: ಗದ್ದಲಕ್ಕೆ ಕಲಾಪ ಬಲಿ
5ನೇ ಲೋಕಸಭೆಗೆ ಹೋಲಿಸಿದರೆ ಕಾರ್ಯನಿರ್ವಹಣೆಯಲ್ಲಿ ಶೇ. 37ರಷ್ಟು ಉತ್ತಮ
ಶೇ. 32ರಷ್ಟು ಮಸೂದೆಗಳ ಬಗ್ಗೆ ಲೋಕಸಭೆಯಲ್ಲಿ ಮೂರು ಗಂಟೆಗಳಿಗಿಂತಲೂ ಹೆಚ್ಚು ಕಾಲ ಚರ್ಚೆ
ಶೇ. 25ರಷ್ಟು ಮಸೂದೆಗಳು ಸಮಿತಿಗಳಿಗೆ ಶಿಫಾರಸು. 15ನೇ ಲೋಕಸಭೆಯಲ್ಲಿ ಶೇ. 75
46- ಮಸೂದೆಗಳು ರದ್ದು
ಶೇ.18- ಪ್ರಶ್ನೆಗಳಿಗೆ ಮೌಖೀಕ ಉತ್ತರ
422 ಗಂಟೆ 19 ನಿಮಿಷ- ಗದ್ದಲದಿಂದ ನಷ್ಟದ ಅವಧಿ

ಖರ್ಗೆಯೇ ಬೆಸ್ಟ್‌
ಕರ್ನಾಟಕದ ಸಂಸದರ ಪೈಕಿ ಮಲ್ಲಿಕಾರ್ಜುನ ಖರ್ಗೆ ಅತೀ ಹೆಚ್ಚು ಅಂದರೆ 155 ಚರ್ಚೆಗಳಲ್ಲಿ ಭಾಗವಹಿಸಿದ್ದರೆ, ಹಾವೇರಿ ಸಂಸದ ಶಿವಕುಮಾರ್‌ ಉದಾಸಿ 143 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಚಾಮರಾಜನಗರ ಕ್ಷೇತ್ರದ ಧ್ರುವನಾರಾಯಣ (119), ತುಮಕೂರಿನ ಎಸ್‌.ಪಿ. ಮುದ್ದಹನುಮೇಗೌಡ (116) ಮತ್ತು ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ (111) ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಸಿ.ಎಸ್‌. ಪುಟ್ಟರಾಜು, ಎಲ್‌.ಆರ್‌.ಶಿವರಾಮೇಗೌಡ ಕೇವಲ ಒಂದು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ 2017ರ ಆಗಸ್ಟ್‌ನಲ್ಲಿ ಸಚಿವರಾಗುವುದಕ್ಕೂ ಮೊದಲು 1 ಬಾರಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಸಂಸದ ಧ್ರುವನಾರಾಯಣ 4 ಖಾಸಗಿ ಮಸೂದೆಯನ್ನೂ ಮಂಡಿಸಿದ್ದಾರೆ. ಇವರನ್ನು ಹೊರತುಪಡಿಸಿ ರಾಜ್ಯದ ಯಾವುದೇ ಸಂಸದರು ಖಾಸಗಿ ಮಸೂದೆಯನ್ನು ಮಂಡಿಸಿಲ್ಲ.

ಶೋಭಾ ಕರಂದ್ಲಾಜೆ ಮುಂಚೂಣಿ
ಪ್ರಶ್ನೆಗಳನ್ನು ಕೇಳಿದ ರಾಜ್ಯ ಸಂಸದರ ಪೈಕಿ ಶೋಭಾ ಕರಂದ್ಲಾಜೆ ಮುಂಚೂಣಿಯಲ್ಲಿದ್ದು, ಒಟ್ಟು 729 ಪ್ರಶ್ನೆಗಳನ್ನು ಕೇಳಿದ್ದಾರೆ. ರಾಯಚೂರಿನ ಸಂಸದ ಬಿ.ವಿ.ನಾಯಕ್‌ 685, ಮೈಸೂರು ಸಂಸದ ಪ್ರತಾಪ್‌ ಸಿಂಹ 680, ದಕ್ಷಿಣ ಕನ್ನಡದ ಸಂಸದ ನಳಿನ್‌ ಕುಮಾರ್‌ ಕಟೀಲು 682 ಪ್ರಶ್ನೆಗಳನ್ನು ಕೇಳಿದ್ದಾರೆ. ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ, ಹಾಸನ ಸಂಸದ ದೇವೇಗೌಡ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. 

Advertisement

ಅನುಮೋದಿತ ಮಸೂದೆ
ಜಿಎಸ್‌ಟಿ ಮಸೂದೆ    
ರೆರಾ ಕಾಯ್ದೆ
ಆರ್ಥಿಕವಾಗಿ ಮೇಲ್ವರ್ಗದವರಿಗೆ ಮೀಸಲು
ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ತಿದ್ದುಪಡಿ
ಕಪ್ಪುಹಣ ತಡೆ ಮಸೂದೆ
ಬೇನಾಮಿ ಆಸ್ತಿ ಮುಟ್ಟುಗೋಲು ಮಸೂದೆ

ಅನುಮೋದನೆಗೆ ಬಾಕಿ
ಭೂಸ್ವಾಧೀನ ಕಾಯ್ದೆ    
ತ್ರಿವಳಿ ತಲಾಖ್‌
ಪೌರತ್ವ ತಿದ್ದುಪಡಿ
ಮೋಟಾರು ವಾಹನ ತಿದ್ದುಪಡಿ ಮಸೂದೆ

Advertisement

Udayavani is now on Telegram. Click here to join our channel and stay updated with the latest news.

Next