Advertisement
ತನಿಖೆಯ ದೃಷ್ಟಿಯಿಂದ ತಕರಾರು ಎತ್ತಲಾದ ಇವಿಎಂಗಳನ್ನು ಸುರಕ್ಷಿತವಾಗಿಡುವಂತೆ ಕೋರಿದೆ. ಕಾಂಗ್ರೆಸ್ ನಿಯೋಗವು ಚುನಾವಣ ಆಯೋಗಕ್ಕೆ 12 ದೂರುಗಳನ್ನು ಒಳಗೊಂಡ ಮನವಿ ಸಲ್ಲಿಸಿದೆ. ಇವಿಎಂಗಳು ಶೇ.99 ಬ್ಯಾಟರಿ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು. ಆದರೆ ಮತ ಎಣಿಕೆ ವೇಳೆ ಬಹುತೇಕ ಇವಿಎಂಗಳ ಬ್ಯಾಟರಿಯು ಶೇ.60ರಿಂದ 70ರಷ್ಟಿತ್ತು ಎಂದು ಆಪಾದಿಸಿದೆ.
ಹರಿಯಾಣ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿರುವ ಚುನಾವಣ ಆಯೋಗವು, ಇಂಥ ಟೀಕೆ ಹಾಗೂ ಜನರ ಇಚ್ಛೆಯನ್ನು ತಿರಸ್ಕರಿಸುವುದು ಅಪ್ರಜಾಪ್ರಭುತ್ವ ಎನಿಸಿಕೊಳ್ಳುತ್ತದೆ ಎಂದು ತಿರುಗೇಟು ನೀಡಿದೆ.