Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಂಡಿ ಸಿನಿಮಾ ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟಗಾರರ ಕಥೆಯನ್ನು ಒಳಗೊಂಡಿದೆ. ಗುಜರಾತ್ ನಲ್ಲಿ ನಡೆದ ಹೋರಾಟಗಳು ಅಂದಿನ ಕಾಲದಲ್ಲೂ ಒಂದೇ ಸಮಯಕ್ಕೆ ಇಲ್ಲೂ ನಡೆದಿವೆ ಎಂಬುದೇ ಅಚ್ಚರಿ. ಚಾರಿತ್ರಕವಾದ ದಂಡಿಯ ಈ ಚರಿತ್ರೆ ಇಡೀ ಕರಾವಳಿ ಕರ್ನಾಟಕದ ಸುತ್ತಲಿನ ಉಪ್ಪಿನ ಸತ್ಯಾಗ್ರಹದ ಚರಿತ್ರೆಯೇ ಆಗಿದೆ. ಜಿಲ್ಲೆಯ ಅಗೇರ, ಮೊಗೇರ, ಹಾಲಕ್ಕಿ, ಗೌಡ ಸಾರಸ್ವತ, ಹವ್ಯಕ, ದೇಶಾವರಿ ಬ್ರಾಹ್ಮಣ ಸಮುದಾಯಗಳು, ನಾಡವರು, ಖಾರ್ವಿ, ಕುಣಬಿ ಸಮುದಾಯಗಳು ತಮ್ಮ ಹೋರಾಟದ ರೀತಿಯನ್ನು ಚಳುವಳಿಯ ಆಶಯದಂತೆ ರೂಪಿಸಿಕೊಂಡ ಕಥನದ ಕಾದಂಬರಿಯ ಎಳೆಯೇ ಈ ಚಿತ್ರವಾಗಿದೆ ಎಂದರು.
Related Articles
Advertisement
ಈಗಾಗಲೇ ಈ ಚಿತ್ರವು ಬೆಂಗಳೂರಿನಲ್ಲಿ ಫಿಲ್ಮ ಫೆಸ್ಟ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಅವರಿಗೂ ಚಿತ್ರ ತೋರಿಸುವ ಆಸೆ ಇದೆ. ಹಿಂದೆ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರಗಳನ್ನು ತೋರಿಸಲು ಪ್ರತ್ಯೇಕ ಚಿತ್ರಮಂದಿರಗಳೂ ಇದ್ದವು. ಯಾವುದೇ ಚಿತ್ರಕ್ಕೆ ಪ್ರಶಸ್ತಿ ಬಂದರೆ ಜನರಿಗೆ ಅದನ್ನು ತಲುಪಿಸಲು ಚಿತ್ರಮಂದಿರ ಅಗತ್ಯವಿದೆ. ಇಂತಹ ಚಿತ್ರಕ್ಕೆ ಥಿಯೇಟರ್ ಸಿಕ್ಕರೆ ಹತ್ತು ನಿರ್ಮಾಪಕರು, ನಿರ್ದೇಶಕರು ಹುಟ್ಟಿಕೊಳ್ಳುತ್ತಾರೆ. ಇದ್ಯಾವುದೂ ಇಲ್ಲದೇ ಇತಿಹಾಸ, ಕಲಾ ಚಿತ್ರಗಳನ್ನು ಜನರಿಗೆ ತಲುಪಿಸುವದು ಹೇಗೆ? ಎಂಬ ಪರಿಸ್ಥಿತಿಗೆ ಬಂದು ತಲುಪಿದ್ದೇವೆ ಎಂದು ಹೇಳಿದರು.
ಈ ವೇಳೆ ನಿರ್ಮಾಪಕಿ ಉಷಾರಾಣಿ, ನಟ ಯುವಾನ್, ದೇವ ಶಾಲಿನಿ ಭಟ್ಟ, ವೆಂಕಟೇಶ ಮೇಸ್ತ, ಭವಾನಿ ಶಂಕರ ಇತರರು ಇದ್ದರು.