ಹಂತದಲ್ಲೇ ಮಕ್ಕಳಿಗೆ ಕಲಿಕೆ ಜತೆಗೆ ಕೃಷಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಆಸ್ತಕಿ ಮೂಡಿಸಲು ಶಾಲಾ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಸಸಿ ಪಡೆದು ನೆಡುವ ಯೋಜನೆ ರೂಪಿಸಿದೆ.
Advertisement
ಶಾಲಾ ಮಕ್ಕಳೇ ಪೋಷಿಸಿ ನೀರೆರೆದು ಬೆಳೆಸಿದ ವಿವಿಧ ಜಾತಿಯ ಹಣ್ಣಿನ ಸಸಿ ಪಡೆದು ಅವರಿಗೆ ಪ್ರೋತ್ಸಾಹ ಧನ ನೀಡಿ ಆ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಶಾಲಾ ಮಕ್ಕಳ ಕೊಡುಗೆಯೂ ಇರುವ ವಿನೂತನ ಯೋಜನೆ ಅನುಷ್ಠಾನಗೊಳಿಸಿದೆ. ಯಲಹಂಕ ತಾಲೂಕು ವ್ಯಾಪ್ತಿಯ ರಾಜಾನುಕುಂಟೆ ಗ್ರಾಮ ಪಂಚಾಯ್ತಿ ಈಗಾಗಲೇ ಹಲವು ಉತ್ತಮ ಯೋಜನೆಗಳನ್ನು ರೂಪಿಸಿದ್ದು ಇದೀಗ ಶಾಲಾ ಮಕ್ಕಳು ಬೆಳೆಸಿದ ವಿವಿಧ ಜಾತಿಯ ಸಸಿಗಳನ್ನು ಪಡೆದು ನೆಡುವ ಯೋಜನೆ ಗ್ರಾಮಸ್ಥರ ಮಚ್ಚುಗೆಗೂ ಪಾತ್ರವಾಗಿದೆ.
Related Articles
Advertisement
ಒಂದು ಸಸಿ ಬೆಳೆಸಿ ನೀಡಿದರೆ 5 ರೂ.: ರಾಜಾನು ಕುಂಟೆ ವ್ಯಾಪ್ತಿಯಲ್ಲಿ ಘನತಾಜ್ಯ ಘಟಕ ಇದೆ. ಆ ಘಟಕದಿಂದ ಸಂಗ್ರಹವಾಗುವ ಹಾಲಿನ ಪ್ಯಾಕೇಟ್ ಅನ್ನು ತಂದು ಅವುಗಳನ್ನು ಆಯಾ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಹಾಲಿನ ಪ್ಯಾಕೇಟ್‌ನಲ್ಲಿ ವಿದ್ಯಾರ್ಥಿಗಳು ಸಸಿ ಬೆಳೆಸಿ ಪೋಷಿಸಬೇಕು. ಒಬ್ಬ ವಿದ್ಯಾರ್ಥಿ ಎಷ್ಟು ಬೇಕಾದರೂ ಗಿಡ ಬೆಳೆಸಬಹುದಾಗಿದೆ ಎಂದು ರಾಜಾನಕುಂಟೆಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ಮುಂದೆ ಕೃಷಿಯತ್ತ ಮರಳಲಿ ಎಂಬ ಸದುದ್ದೇಶ ಕೂಡ ಇದರಲ್ಲಿ ಸೇರಿದೆ. ಒಂದು ಸಸಿಗೆ 5ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈಗಾಗಲೇ 1500ಕ್ಕೂ ಅಧಿಕ ಸಸಿಗಳನ್ನು ವಿದ್ಯಾರ್ಥಿಗಳಿಂದ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಪಂನಿಂದ ಉತ್ತಮ ಕಾರ್ಯಮಾವು, ಹಲಸು, ನೆರಳೆ ಹಣ್ಣಿನ ಗಿಡಗಳಕೆಳಗೆ ಅನೇಕ ಸಸಿಗಳು ಬಿದ್ದು ಬೆಳೆಯುತ್ತವೆ. ಅವುಗಳನ್ನು ತಂದು ವಿದ್ಯಾರ್ಥಿಗಳು ಪೋಷಣೆ ಮಾಡುತ್ತಾರೆ. ಆ ಗಿಡ ನನ್ನದು ಮುಂದೊಂದು ದಿನ ಹಣ್ಣುಗಳನ್ನು ಈ ಗ್ರಾಮದ ಜನರಿಗೆ ನೀಡಲಿದೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಲಿದೆ ಎಂದು ಶ್ರೀರಾಮನ ಹಳ್ಳಿಯ ಸಾಯಿಶಂಕರ ವಿದ್ಯಾ ಶಾಲೆಯ ದೈಹಿಕ ಶಿಕ್ಷಕ ಉಮೇಶ್‌ಕುಮಾರ್ ಹೇಳುತ್ತಾರೆ. ಮಕ್ಕಳು ಉತ್ಸಾಹದಿಂದ ಸಸಿ ಬೆಳೆಸುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಈಗಾಗಲೇ ಗ್ರಾಮ ಪಂಚಾಯ್ತಿಗೆ ವಿವಿಧ ಜಾತಿಯ ನೂರಾರು ಹಣ್ಣಿನ ಗಿಡಗಳನ್ನು ಮಕ್ಕಳು
ನೀಡಿದ್ದಾರೆ. ಕೃಷಿ ಮತ್ತು ಪರಿಸರ ಸಂರಕ್ಷಣೆ ದೃಷ್ಟಿಯಿಂದಲೂ ಗ್ರಾಮ ಪಂಚಾಯ್ತಿ ಉತ್ತಮ ಕಾರ್ಯಕ್ರಮ ರೂಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕಲಿಕೆ ಹಂತದಲ್ಲೇ ಮಕ್ಕಳಿಗೆ ಕೃಷಿ ಮತ್ತು ಪರಿಸರದ ಬಗ್ಗೆ ಜಾಗೃತಿಮೂಡಲಿ ಎಂಬುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಶಾಲಾ ಮಕ್ಕಳುಕೂಡ ಆಸಕ್ತಿಯಿಂದ ಸಸಿ ಬೆಳೆಸಿ ಗ್ರಾಮ ಪಂಚಾಯ್ತಿಗಳಿಗೆ ನೀಡುತ್ತಿರುವುದು ಸಂತಸದ ವಿಚಾರವಾಗಿದೆ.
-ರಾಜೇಶ್, ಪಿಡಿಒ ರಾಜಾನುಕುಂಟೆ -ದೇವೇಶ ಸೂರಗುಪ್ಪ