ಶ್ರೀನಗರ: ಸೋಮವಾರ ಬೆಳಗ್ಗೆ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರ್ ಸಂಘಟನೆಗೆ ಸೇರಿದ ಕಮಾಂಡರ್ ಸಹಿತ ಮೂವರು ಲಷ್ಕರ್ ಉಗ್ರರನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದೆ. ಮೂವರು ಪೊಲೀಸರು ಮತ್ತು ಇತರ ನಾಲ್ವರ ಸಾವಿಗೆ ಕಾರಣನಾಗಿದ್ದ ಲಷ್ಕರ್ ಎ ತೋಯ್ಬಾದ ಪ್ರಮಖ ಉಗ್ರ ಕಮಾಂಡರ್ ಮುದಾಸಿರ್ ಪಂಡಿತ್ ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸಾಪೋರ್ ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ರವಿವಾರ ರಾತ್ರಿಯೇ ಈ ಎನ್ ಕೌಂಟರ್ ಆರಂಭವಾಗಿತ್ತು.
ಮುದಾಸಿರ್ ಪಂಡಿತ್ ಸೇರಿದಂತೆ ಮೂವರು ಉಗ್ರರು ಈ ಸ್ಥಳದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ರವಿವಾರ ರಾತ್ರಿ ಸ್ಥಳವನ್ನು ಸುತ್ತುವರಿದು, ಕಾರ್ಯಾಚರಣೆ ಆರಂಭಿಸಿದ್ದರು.
ಇದನ್ನೂ ಓದಿ:ಕೋವಿಡ್ ವಿರುದ್ಧ ಹೋರಾಟಕ್ಕೆ ಯೋಗದಿಂದ ಬಲ: ಪ್ರಧಾನಿ ನರೇಂದ್ರ ಮೋದಿ
ಇತ್ತೀಚೆಗೆ ಮೂರು ಪೊಲೀಸರು, ಇಬ್ಬರು ಕೌನ್ಸಿಲರ್ ಗಳು ಮತ್ತು ಇಬ್ಬರು ನಾಗರಿಕರನ್ನು ಹತ್ಯೆಗೈದ ಪ್ರಮುಖ ಲಷ್ಕರ್ ಭಯೋತ್ಪಾದಕ ಮುದಾಸೀರ್ ಪಂಡಿತ್ ಮತ್ತು ಇತರ ಹಲವಾರು ಭಯೋತ್ಪಾದಕ ಅಪರಾಧಗಳು ಸೊಪೋರ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟವು ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಸೊಪೋರ್‌ನಲ್ಲಿ ನಡೆದ ಸಭೆಯಲ್ಲಿ ಇಬ್ಬರು ಬಿಜೆಪಿ ಕೌನ್ಸಿಲರ್‌ಗಳು ಮತ್ತು ಪೊಲೀಸ್ ಅಧಿಕಾರಿಯ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮುದಾಸಿರ್ ಪಂಡಿತನನ್ನು ಪೊಲೀಸರು ಹುಡುಕುತ್ತಿದ್ದರು.
ಎನ್ ಕೌಂಟರ್ ನಲ್ಲಿ ಹತ್ಯೆಯಾದ ಮತ್ತೊಬ್ಬ ಉಗ್ರ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ ಪಾಕಿಸ್ಥಾನ ನಿವಾಸಿಯಾಗಿದ್ದು, ಕಳೆದ 2018ರಿಂದ ಉತ್ತರ ಕಾಶ್ಮೀರದಲ್ಲಿ ಸಕ್ರೀಯನಾಗಿದ್ದ.