Advertisement

ಹಂದ್‌ವಾರಾದಲ್ಲಿ ಎನ್‌ಕೌಂಟರ್‌: ಮೂವರು ಉಗ್ರರಿಗಾಗಿ ಶೋಧ

11:05 AM Aug 22, 2017 | Team Udayavani |

ಶ್ರೀನಗರ : ಉತ್ತರ ಕಾಶ್ಮೀರದ ಕುಪ್‌ವಾರಾ ಜಿಲ್ಲೆಯ ಹಂದ್‌ವಾರಾ ಪ್ರದೇಶದಲ್ಲಿ ಇಂದು ಮಂಗಳವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್‌ ತಲೆದೋರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಇಲ್ಲಿಂದ 85 ಕಿ.ಮೀ. ದೂರದ ಹಂದ್‌ವಾರಾದ ಹೋಂಗ್‌ನೀಕೋಟ್‌ ಎಂಬಲ್ಲಿ ಉಗ್ರರು ಅವಿತುಕೊಂಡಿರುವ ಬಗ್ಗೆ ಖಚಿತ ಸುಳಿವು ಪಡೆದ ಭದ್ರತಾ ಪಡೆಗಳು ಶಂಕಿತ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದು ಶೋಧ ಕಾರ್ಯಾಚರಣೆಗೆ ತೊಡಗಿದವು. 

ಕನಿಷ್ಠ  ಮೂವರು ಉಗ್ರರು ಖಚಿತ ಸ್ಥಳದಲ್ಲಿ ಅಡಗಿಕೊಂಡಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ವರೆಗಿನ ಎನ್‌ಕೌಂಟರ್‌ನಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next