ದಾಂತೆವಾಡ ( ಛತ್ತೀಸ್ ಗಢ್): ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕನನ್ನು ಹತ್ಯೆ ಮಾಡಲಾಗಿದೆ. ಈ ಘಟನೆಯು ಛತ್ತೀಸ್ ಗಢ್ ರಾಜ್ಯದ ದಾಂತೆವಾಡ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಗೀಡಂ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಪೊಲೀಸರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ತಂಡವು ಮಾವೋವಾದಿಗಳ ಗುಂಪಿಗೆ ನುಗ್ಗಿದಾಗ ಎನ್‌ಕೌಂಟರ್ ನಡೆಯಿತು.
ಇದನ್ನೂ ಓದಿ:ಅಶ್ಲೀಲ ವಿಡಿಯೋ ತಂದ ಆಪತ್ತು..!
ಪ್ಲಟೂನ್ ನಂ 16 ಸೆಕ್ಷನ್ ಕಮಾಂಡರ್ ಆಗಿದ್ದ ರಾಮ್ಸು ಕೊರ್ರಾಮ್ ನನ್ನು ಹತ್ಯೆ ಮಾಡಲಾಗಿದೆ. ಈತನ ತಲೆಗೆ ಐದು ಲಕ್ಷ ರೂ. ಇನಾಮು ಘೋಷಿಸಲಾಗಿತ್ತು. ಘರ್ಷಣೆಯ ನಂತರ, ಡಿಆರ್‌ಜಿ ತಂಡವು ಮಾವೋವಾದಿಯ ಶವವನ್ನು ವಶಪಡಿಸಿಕೊಂಡಿದೆ.
ಎನ್‌ಕೌಂಟರ್ ಸ್ಥಳದಿಂದ 7.62 ಎಂಎಂ ಪಿಸ್ತೂಲ್, 5 ಕೆಜಿ ಐಇಡಿ, ವೈರ್‌ಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.