Advertisement
ಸಹಿ ಮಾಡುವ ಸಮಾರಂಭದಲ್ಲಿ, ಎರಡೂ ಕಡೆಯಿಂದ ಪ್ರಮುಖರು ಭಾಗವಹಿಸಿದ್ದರು.ಕಾಲೇಜಿನಲ್ಲಿ ದಾಖಲಾದ ವಿದ್ಯಾರ್ಥಿಗಳ ಕೌಶಲವನ್ನು ಹೆಚ್ಚಿಸುವ ಉದ್ದೇಶದಿಂದ ಒಪ್ಪಂದದ ಆರಂಭದ ಸಂಕೇತವಾಗಿ ಡಿಜಿಟಲ್ ಸೊಲ್ಯೂಷನ್ಸ್‌ನ ಸಿಇಒ ಗುರುಪ್ರಸಾದ್ ಕಾಮತ್ ಅವರು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದರು.
Related Articles
Advertisement
ಸಹಯೋಗದ ಮೂಲಕ ಪ್ರಾಯೋಗಿಕ ಜ್ಞಾನವನ್ನು ಬೆಳೆಸಿ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ಲ್ಯಾಂಡ್‌ಸ್ಕೇಪ್‌ನಲ್ಲಿ ಸೂಕ್ತವಾದ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಎರಡೂ ಸಂಸ್ಥೆಗಳ ಬದ್ಧತೆ ಹೊಂದಿವೆ.
ಪ್ಲೇಸ್‌ಮೆಂಟ್ ಅಧಿಕಾರಿ ಹರೀಶ್, ಉದ್ಯೋಗ ಸಂಯೋಜಕರಾದ ಮಹೇಶ್ ಕುಮಾರ್ ಮತ್ತು ರಜತ್ ಬಂಗೇರ, ಕಲಿಕೆಯ ಆವಿಷ್ಕಾರಗಳು ಮತ್ತು ವಿಷಯಗಳ ನಿರ್ದೇಶಕ ದರ್ಶನ್ ಪಾಟೀಲ್, ಡಿಜಿಟಲ್ ಇಮೇಜಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್ ಮಧುಚಂದ್ರ ಕೊಟ್ಟಾರಿ ಮಹತ್ವದ ಸಂದರ್ಭದಲ್ಲಿ ಉಪಸ್ಥಿತರಿದ್ದರು.