Advertisement
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಕೌಶಲ್ಯಾಭಿವೃದ್ಧಿ ಇಲಾಖೆ ಆಯೋಜಿಸಿದ್ದ ಸರಕು ಸಾಗಾಣಿಕೆ ವಲಯಕ್ಕೆ ಸಂಬಂಧಿಸಿದಂತೆ ಇಂಡಸ್ಟ್ರಿ ಕನೆಕ್ಟ್ ಕಾನಕ್ಲೇವ್ ನಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಲಾಯಿತು. ಈ ಮೂಲಕ ಸರಕು ಸಾಗಣೆ ವಲಯದಲ್ಲಿ ಉದ್ಯೋಗ ಕಲ್ಪಿಸಲು ಶೈಕ್ಷಣಿಕ ಮತ್ತು ಉದ್ಯೋಗದಾತರನ್ನು ಒಂದು ಕಡೆ ಸೇರಿಸಲು ಸಾಧ್ಯವಾಗಿದೆ.
Related Articles
Advertisement
ಎನ್ ಇಪಿಯು ಶಿಕ್ಷಣಶಾಸ್ತ್ರಗಳಲ್ಲಿ ಒಂದಾಗಿದೆ. ಉದ್ಯೋಗಸ್ಥಳ ಸಂಸ್ಕೃತಿಗೆ ವಿದ್ಯಾರ್ಥಿಗಳನ್ನು ಸಂವೇದನಾಶೀಲಗೊಳಿಸುವ, ಉದ್ಯಮಗಳಿಂದ ವಿದ್ಯಾರ್ಥಿಗಳಿಗೆ ರಚಿಸಲಾದ ಇಂಟರ್ನ್ಶಿಪ್ ಮತ್ತು ಅಪ್ರೆಂಟಿಸ್ಶಿಪ್ ಅವಕಾಶಗಳನ್ನು ಒದಗಿಸಲಾಗುತ್ತದೆ. ಉದ್ಯೋಗದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ಉಪಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಕಾಡೆಮಿ ಮತ್ತು ಉದ್ಯಮಗಳು ಒಗ್ಗೂಡಬೇಕಾಗಿದೆ ಎಂದರು.
ಪಠ್ಯಕ್ರಮದ ಭಾಗವಾಗಿ ಇಂಟರ್ನ್ಶಿಪ್ ಮತ್ತು ಎಂಬೆಡಿಂಗ್ ಅಪ್ರೆಂಟಿಸ್ಶಿಪ್ ಕೆಲವು ದಿಟ್ಟ ಉಪಕ್ರಮಗಳಾಗಿವೆ. ಈ ಯೋಜನೆಯಿಂದ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೂ ಸಹಾ ಉತ್ತೇಜನ ನೀಡಲಿದೆ, ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು, ಈ ಕಾರ್ಯಕ್ರಮದಿಂದ ಉದ್ಯೋಗವನ್ನರಸಿ ತಮ್ಮ ಪ್ರದೇಶಗಳಿಂದ ನಿರುದ್ಯೋಗಿಗಳ ವಲಸೆಯನ್ನು ತಡೆಗಟ್ಟಬಹುದಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಈ ಉಪಕ್ರಮವು ಯುವಕರನ್ನು ಅವರ ಕುಟುಂಬಗಳನ್ನು ತೊರೆದು ಹೊರ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುವುದರಿಂದ ಅವರ ಕುಟುಂಬದಲ್ಲಿ ನೆಮ್ಮದಿ ಮಾಡುತ್ತದೆ ಎಂದು ಹೇಳಿದರು.
ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್ ಸೆಲ್ವಕುಮಾರ್, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಿನ್ ಡಿ ಗೌಡ, ಭಾರತೀಯ ಲಾಜಿಸ್ಟಿಕ್ ಸ್ಕಿಲ್ ಕೌನ್ಸಿಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿಕಾಂತ್, ಫ್ಲಿಪ್ ಕಾರ್ಟ್ ನ ಮುಖ್ಯ ಆಪರೇಟಿಂಗ್ ಅಧಿಕಾರಿ ಕೃಷ್ಣ ರಾಘವನ್ ಮುಂತಾದವರು ಉಪಸ್ಥಿತರಿದ್ದರು