Advertisement

ಗ್ರಾಮಸ್ಥರಿಗೆ ಯೋಜನೆ ಮಾಹಿತಿ ನೀಡಿ: ಬಳ್ಳಾರಿ

03:45 PM Dec 22, 2018 | Team Udayavani |

ಹಾವೇರಿ: ತಾಲೂಕಿನ ಕುಳೆನೂರು ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗಚೀಟಿ ವಿತರಣೆ ಹಾಗೂ ರೋಜಗಾರ ದಿನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮನೆ ಮನೆಗೆ ಭೇಟಿ ನೀಡಿ ಕರಪತ್ರ ಹಂಚುವ ಮೂಲಕ ಯೋಜನೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ಮಕ್ಕಳ ಮೂಲಕ ಸ್ವಚ್ಛತೆಯ ಅರಿವು ಮನೆ ಮನೆಗೂ ಪ್ರಸಾರವಾಗಬೇಕು ಎಂದರು.

Advertisement

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ.ಎನ್‌. ಹುಬ್ಬಳ್ಳಿ ಮಾತನಾಡಿ, ಮುಖ್ಯಮಂತ್ರಿಗಳ 21ಅಂಶಗಳ ಕ್ರಿಯಾ ಯೋಜನೆ ತಯಾರಿಸಲಾಗುವುದು. ಈ ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿವಾರು ಹಂಚಿಕೆ ಮಾಡಲಾಗಿದೆ. ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಒಳಗೊಂಡಂತೆ ವೈಯಕ್ತಿಕ ಭೂ ಅಭಿವೃದ್ಧಿ, ಕುರಿ-ದನದೊಡ್ಡಿ, ಸಮಗ್ರವಾಗಿ ಸ್ಮಶಾನ ಅಭಿವೃದ್ಧಿ, ಕೊಳವೆ ಬಾವಿಗಳ ಮರುಪೂರಣ ಘಟಕ, ನಮ್ಮ ಹಳ್ಳಿ ನಮ್ಮ ನೀರು, ನಮ್ಮೂರ ಕೆರೆ, ನಮ್ಮ ಹೊಲ ನಮ್ಮ ದಾರಿ, ಕೃಷಿ ಹೊಂಡ, ಬಹುಕಮಾನು ತಡೆಗೋಡೆ, ಎರೆಹೂಳು ಗೊಬ್ಬರ ತೊಟ್ಟಿ, ಜೈವಾನೀಲ ಸ್ಥಾವರ ನಿರ್ಮಾಣಕ್ಕಾಗಿ ಗುಂಡಿ ಅಗಿಯುವುದು, ರೈತರ ಕಣ, ಅಂಗನವಾಡಿ ಕೇಂದ್ರ, ಗ್ರಾಮೀಣ ಗೋದಾಮು, ರಾಜೀವ ಗಾಂಧಿ  ಸೇವಾ ಕೇಂದ್ರ, ಸರ್ಕಾರಿ ಶಾಲೆಗಳಿಗೆ, ಆಟದ ಮೈದಾನ, ಶಾಲಾ ಆವರಣಗೋಡೆ ನಿರ್ಮಾಣ ಮಾಡುವ ಕಾಮಗಾರಿ ಹಮ್ಮಿಕೊಳ್ಳಬಹುದು ಎಂದರು.

ಅತ್ಯವಶ್ಯವಿರುವ ಶಾಲೆಗಳಿಗೆ ಶೌಚಾಲಯ ನಿರ್ಮಾಣ, ಹಾಗೂ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸಮಗ್ರವಾಗಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು, ಕಾಮಗಾರಿಗಳನ್ನು ಆಯ್ಕೆಮಾಡಿ, ಕ್ರಿಯಾ ಯೋಜನೆ ತಯಾರಿಸುವುದಾಗಿದೆ  ಮತ್ತು ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳ ಕೈಗೊಳ್ಳುವ ಬಗ್ಗೆ, ಕೃಷಿ, ಅರಣ್ಯ, ತೋಟಗಾರಿಕೆ ಹಾಗೂ ಕೈಗೊಳ್ಳಬಹುದಾದ ವೈಯಕ್ತಿಕ ಕಾಮಗಾರಿಗಳ ಕುರಿತು ಅವರು ತಿಳಿಸಿದರು.

ಸರ್ಕಾರದ ಮಾಹಾತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕವಾಗಿ 50 ಸಾವಿರ ಕೋಟಿ ರೂ. ಅನುದಾನದಲ್ಲಿ ಜನರ ಜೀವನ ಉಪಯೋಗ ಕಾರ್ಯಕ್ರಮಗಳು ಹಾಗೂ ಜೀವನ ಸುಧಾರಣೆಗೆ ಮೂಲಸೌಕರ್ಯ ಕಲ್ಪಿಸಲು 294 ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ತಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ತಾಲೂಕು ಮಟ್ಟದ ಸಂಪರ್ಕ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next