Advertisement

Jobs: ನೌಕರರ ಯೋಗಕ್ಷೇಮ: 30 ದೇಶಗಳ ಪಟ್ಟಿ- ಭಾರತ ನಂ.2

09:14 PM Nov 03, 2023 | Team Udayavani |

ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಬಗ್ಗೆ ಹೆಚ್ಚು ಗಮನ ಕೊಡುವ ದೇಶ ಯಾವುದು? ಮ್ಯಾಕಿನ್‌ಸ್ಲೆ ಹೆಲ್ತ್‌ ಇನ್‌ಸ್ಟಿಟ್ಯೂಟ್‌ ನಡೆಸಿದ ಜಾಗತಿಕ ಸಮೀಕ್ಷೆಯ ಪ್ರಕಾರ, ವಿಶ್ವದಲ್ಲೇ ಉದ್ಯೋಗಿಗಳ ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಕಡೆಗೆ ಕಾಳಜಿ ವಹಿಸುವ ದೇಶವೆಂದರೆ ಟರ್ಕಿಯಂತೆ! ಅಂದ ಹಾಗೆ, ಭಾರತ ಈ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.

Advertisement

ಭಾರತೀಯರ ಪ್ರಕಾರ
30 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಟರ್ಕಿ ಮೊದಲ ಸ್ಥಾನ ಪಡೆದರೆ, ಭಾರತ 2ನೇ ಸ್ಥಾನ ಪಡೆದಿದೆ. ಚೀನಾ ಮೂರನೇ ಸ್ಥಾನದಲ್ಲಿದೆ. 30 ದೇಶಗಳ 30 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಸಮೀಕ್ಷೆಯಲ್ಲಿ ಭಾಗಿಯಾದ ಭಾರತೀಯರು ತಮ್ಮ ದೈಹಿಕ ಆರೋಗ್ಯವನ್ನು ಶೇ.81, ಮಾನಸಿಕ ಆರೋಗ್ಯ ಶೇ.79, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಶೇ.78 ಎಂದು ನಮೂದಿಸಿದ್ದಾರೆ.

ಜಪಾನ್‌ಗೆ ಕೊನೇ ಸ್ಥಾನ!
ಉದ್ಯೋಗಿಗಳ ಯೋಗಕ್ಷೇಮದ ಪಟ್ಟಿಯಲ್ಲಿ ಜಪಾನ್‌ ಕೊನೆಯ ಸ್ಥಾನ ಪಡೆದುಕೊಂಡಿದೆ. ಇಲ್ಲಿನ ಉದ್ಯಮಿಗಳು ನೌಕರರಿಗೆ ಜೀವಿತಾವಧಿ ನೌಕರಿ ಮತ್ತು ಉದ್ಯೋಗ ಭದ್ರತೆ ಒದಗಿಸುತ್ತಿದ್ದಾರೆ. ಆದರೆ, ತಮ್ಮ ಕೆಲಸದ ಬಗ್ಗೆ ತೃಪ್ತಿ ಇರದಿದ್ದರೆ ಉದ್ಯೋಗಿಗಳಿಗೆ ಆ ಕೆಲಸ ಬಿಡಲು ಸಾಧ್ಯವಾಗುತ್ತಿಲ್ಲ. ಜತೆಗೆ, ಕೆಲಸದ ಸ್ಥಳದಲ್ಲಿನ ಗಣನೀಯ ಒತ್ತಡವೂ ಉದ್ಯೋಗಿಗಳಿಗೆ ಶಾಪವಾಗಿಬಿಟ್ಟಿದೆ.

ಎಷ್ಟು ದೇಶಗಳಲ್ಲಿ ಸಮೀಕ್ಷೆ? – 30
ಸಮೀಕ್ಷೆಯಲ್ಲಿ ಭಾಗಿಯಾದವರು- 30,000

ಟಾಪ್‌ ದೇಶಗಳು ಮತ್ತು ಅಂಕ
1. ಟರ್ಕಿ – ಶೇ.78
2. ಭಾರತ- ಶೇ.76
3. ಚೀನಾ – ಶೇ.75
(ನಂತರದ ಸ್ಥಾನಗಳು- ನೈಜೀರಿಯಾ, ಕ್ಯಾಮೆರೂನ್‌, ಸ್ವೀಡನ್‌, ಯುಎಇ, ಮೆಕ್ಸಿಕೋ, ಈಜಿಪ್ಟ್ ಇತ್ಯಾದಿಗಳು)

Advertisement
Advertisement

Udayavani is now on Telegram. Click here to join our channel and stay updated with the latest news.

Next