Advertisement

ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿ ಕೈಗಾರಿಕೆಗೆ ಆದ್ಯತೆ ಕೊಡಿ

02:11 AM Jan 21, 2019 | Team Udayavani |

ಬೆಂಗಳೂರು: ಕೃಷಿಗೆ ಒತ್ತು, ಕೈಗಾರಿಕೆಗೆ ಆದ್ಯತೆ, ನವೋದ್ಯಮಕ್ಕೆ ಉತ್ತೇಜನ, ರಫ್ತಿಗೆ ಪ್ರೋತ್ಸಾಹ, ಐಟಿ ವಲಯಕ್ಕೆ ಚೈತನ್ಯ ನೀಡುವಂತಹ, ವಿಪುಲ ಉದ್ಯೋಗಾವಕಾಶ ಸೃಷ್ಟಿಸುವ, ದೇಶಿ ಆರ್ಥಿಕತೆಗೆ ಕಾಳಜಿ ವ್ಯಕ್ತಪಡಿಸುವ ಮೂಲಕ ದೇಶದ ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಅಡಿಪಾಯ ಹಾಕಬಲ್ಲ “ಒಳಗೊಳ್ಳುವ ಪ್ರಣಾಳಿಕೆ’ ನಿಮ್ಮದಾಗಿರಲಿ ಎಂದು ಕೈಗಾರಿಕೋದ್ಯಮಿಗಳು, ಆರ್ಥಿಕ ತಜ್ಞರು, ಐಟಿ ದಿಗ್ಗಜರು ಮತ್ತು ನವೋದ್ಯಮ ಪ್ರವರ್ತಕರು ಕಾಂಗ್ರೆಸ್‌ ಪಕ್ಷಕ್ಕೆ ಸಲಹೆ ನೀಡಿದ್ದಾರೆ.

Advertisement

ಕೆಪಿಸಿಸಿ ಸಂಶೋಧನಾ ವಿಭಾಗದ ವತಿಯಿಂದ ಭಾನುವಾರ ಸೇಂಟ್‌ ಜೋಸೆಫ್ ಇನ್ಸಿಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ, ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರೊಂದಿಗೆ ಆಯೋಜಿಸಲಾಗಿದ್ದ ಸಮಾಲೋಚನೆಯಲ್ಲಿ ಈ ಸಲಹೆಗಳು ಕೇಳಿ ಬಂದವು.

ಹಣಕಾಸು ಆಯೋಗದ ಮುಖ್ಯಸ್ಥ ಡಾ.ಗೋವಿಂದರಾವ್‌, ನೋಟು ಅಮಾನ್ಯಿàಕರಣ ಮಧ್ಯಮ ಹಾಗೂ ಸಣ್ಣ ಕೈಗಾರಿಕಾ ಕ್ಷೇತ್ರಕ್ಕೆ ಕೊಡಲಿ ಪೆಟ್ಟು ನೀಡಿದೆ. ಆದ್ದರಿಂದ ದೇಶಿಯ ಹೂಡಿಕೆ ಮತ್ತು ಉಳಿತಾಯಕ್ಕೆ ವಿಶೇಷ ಒತ್ತು ನೀಡಬೇಕಾಗಿದೆ. ನೀರಾವರಿ, ವಿಸ್ತರಣೆ, ಮಣ್ಣಿನ ಆರೋಗ್ಯ, ಅಂತರ್ಜಲ ವೃದಿಟಛಿಗೆ ಹೆಚ್ಚು ಅನುದಾನ ಕೊಟ್ಟು ಆ ಮೂಲಕ ಕೃಷಿಗೆ ಒತ್ತು ನೀಡಬೇಕಾಗಿದೆ ಎಂದರು.

ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮುಜುಂದಾರ್‌ ಷಾ ಮಾತನಾಡಿ, ಎಂಎಸ್‌ಎಂಇ ವಲಯದ ಬಲವರ್ಧನೆ, ಉತ್ತೇಜನಕಾರಿ ನವೋದ್ಯಮ ವಾತಾವರಣ ರೂಪಿಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲಿನ ವೆಚ್ಚವನ್ನು ದ್ವಿಗುಣಗೊಳಿಸಬೇಕು. ವೈದ್ಯಕೀಯ ಶಿಕ್ಷಣದಲ್ಲಿನ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಬೇಕು ಎಂದರು. ಎಫ್ಕೆಸಿಸಿಐನ ಶಿವಷಣ್ಮುಗಂ, 1ನೇ ಸ್ಥರದ ನಗರಗಳ ಮೇಲಿನ ಒತ್ತಡ ಕಡಿಮೆ ಮಾಡಲು 2ನೇ ಸ್ಥರದ ನಗರಗಳನ್ನು ಬೆಳೆಸಬೇಕು. ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರವನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ, ಸಾರಿಗೆ ವ್ಯವಸ್ಥೆಯನ್ನು ಉತ್ತಮ ಪಡಿಸಬೇಕು, ಅಸಂಘಟಿತ ಕಾರ್ಮಿಕರನ್ನು ಸಂಘಟಿತ ವಲಯಕ್ಕೆ ತರಬೇಕು, ಆಟೋಮೊಬೈಲ್‌ ವಲಯದ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು, ನೋಟು ಅಮಾನ್ಯಿàಕರಣದಿಂದ ನೆಲಕಚ್ಚಿರುವ “ಮೈಕ್ರೋ ಫೈನಾನ್ಸ್‌’ ಕ್ಷೇತ್ರಕ್ಕೆ ಚೇತರಿಕೆ ಕೊಡಬೇಕು, “ಕೌಶಲ್ಯ ಭಾರತ’ ಬಲವರ್ಧನೆಗೊಳಿಸಬೇಕು, ಕೈಗಾರಿಕೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾದ ಸಾಮಾಜಿಕ ವಿಷಯಗಳನ್ನು ಪ್ರಣಾಳಿಕೆ ಒಳಗೊಂಡಿರಲಿ, ಮಹಿಳಾ ನವೋದ್ಯಮಕ್ಕೆ ಪ್ರೋತ್ಸಾಹ ಕೊಡಿ, ಕೈಗಾರಿಕಾ ಸ್ನೇಹಿ ನೀತಿಗಳ ಬಗ್ಗೆ ಗಮನ ಕೊಡಿ ಎಂಬ ಸಲಹೆಗಳನ್ನು ನೀಡಲಾಯಿತು. ಸಮಾಲೋಚನೆಯಲ್ಲಿ ಎಐಸಿಸಿ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ. ರಾಜೀವಗೌಡ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next