Advertisement

ಉತ್ತಮ ರಸ್ತೆ, ಚರಂಡಿ, ಸೇತುವೆ ಅಭಿವೃದ್ಧಿಗೆ ಒತ್ತು

10:33 PM Aug 14, 2019 | Team Udayavani |

ಚಾಮರಾಜನಗರ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 20 ಕೋಟಿಗೂ ಅಧಿಕ ವೆಚ್ಚದ ರಸ್ತೆ, ಚರಂಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಸಚಿವ, ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.

Advertisement

ತಾಲೂಕಿನ ಹರದನಹಳ್ಳಿಯಿಂದ ಅರಕಲವಾಡಿಯವರೆಗೆ ಲೋಕೋಪಯೋಗಿ ಇಲಾಖೆಯಿಂದ ರಾಜ್ಯ ಹೆದ್ದಾರಿ ಯೋಜನೆ (ಎಸ್‌ಎಚ್‌ಟಿಪಿ) ಅಡಿ 18.5 ಕೋಟಿ ವೆಚ್ಚದಲ್ಲಿ ಆಯ್ದ ಭಾಗಗಳಲ್ಲಿ 17.85 ಕಿ.ಮೀ ಗ್ರಾಮ ಪರಿಮಿತಿಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ 2030 ಕಿ.ಮೀ 11 ಅಡ್ಡಮೋರಿ ಸೇತುವೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ನಂತರ ಅರಕಲವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1 ಕೋಟಿ ವೆಚ್ಚದಲ್ಲಿ ಹೆಚ್ಚುವರಿ 6 ಕೊಠಡಿಗಳು ಹಾಗೂ ಶೌಚಾಲಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಗುದ್ದಲಿ ಪೂಜೆ: ಯಾನಗನಹಳ್ಳಿಯ ಗ್ರಾಮದಲ್ಲಿ ನಾಯಕರ ಬಡಾವಣೆಗೆ ಟಿಎಸ್‌ಪಿ ಯೋಜನೆಯಡಿ 40 ಲಕ್ಷ ಹಾಗೂ ಹೊಸ ನಾಯಕರ ಬಡಾವಣೆಗೆ 22 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ,ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಅದೇ ರೀತಿ ಮೂಡಲ ಹೊಸಹಳ್ಳಿ ಗ್ರಾಮದಲ್ಲಿ ಎಸ್‌ಇಪಿ ಯೋಜನೆಯಡಿ ಪರಿಶಿಷ್ಟರ ಬೀದಿಯಲ್ಲಿ 15 ಲಕ್ಷರೂ. ವೆಚ್ಚದಲ್ಲಿ ಸಿಸಿ ರಸ್ತೆ,ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.

29 ಕೋಟಿ ಅನುದಾನ: ನಂತರ ಮಾತನಾಡಿದ ಅವರು, ಕಳೆದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ತಾವು ಲೋಕೋಪಯೋಗಿ ಸಚಿವರಾಗಿದ್ದ ರೇವಣ್ಣ ಅವರ ಬಳಿ ಕ್ಷೇತ್ರ ವ್ಯಾಪ್ತಿಗೆ 29 ಕೋಟಿ ಅನುದಾನ ಬಿಡುಗಡೆಗೊಳಿಸಿ ಇಂದು ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಅಭಿವೃದ್ಧಿಗೆ ಹೆಚ್ಚು ಒತ್ತು: ರಸ್ತೆಗಳು ಗ್ರಾಮೀಣ ಜನರ ಜೀವನಾಡಿಯಾಗಿದೆ. ಸಂಪರ್ಕ ಸರಪಳಿ ರಸ್ತೆಗಳು ಗ್ರಾಮಗಳ ನಡುವಿನ ಕೊಂಡಿಗ ಳಾಗಿದ್ದು,ಸಾರಿಗೆ ಸಂಚಾರಕ್ಕೆ ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಚರಂಡಿ, ಸೇತುವೆ ಅಭಿವೃದ್ಧಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜನರ ಆಶಯಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

Advertisement

ಮತ್ತಷ್ಟು ಅಭಿವೃದ್ಧಿ: ಜನರ ಅಭಿವೃದ್ಧಿ ಕೆಲಸಗಳೆ ನನ್ನ ಗುರಿಯಾಗಿದೆ. ವಿವಿಧ ಅಭಿವೃದ್ಧಿ ಯೋಜನೆಯಡಿ ಅನುದಾನ ತಂದು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದು, ಮುಂದೆಯೂ ಸಹ ಜನತೆಯ ಸಹಕಾರದಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಶಾಸಕರು ತಿಳಿಸಿದರು.

ಜಿಪಂ ಸದಸ್ಯೆ ಶಶಿಕಲಾ, ತಾಪಂ ಅಧ್ಯಕ್ಷೆ ದೂಡ್ಡಮ್ಮ, ತಾಪಂ ಸದಸ್ಯರಾದ ರತ್ನಮ್ಮ, ಮಹದೇವಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್‌, ಗ್ರಾಪಂ ಅಧ್ಯಕ್ಷರಾದ ಜಯಮ್ಮ, ಮಹದೇವಯ್ಯ, ಉಪಾಧ್ಯಕ್ಷ ಮಾದಮ್ಮ, ಜಿಪಂ ಮಾಜಿ ಸದಸ್ಯರಾದ ಅರಕಲವಾಡಿ ಸೋಮುನಾಯಕ, ಕಾವೇರಿ, ಶಿವಕುಮಾರ್‌, ಎ.ಎಸ್‌.ಗುರುಸ್ವಾಮಿ, ಮುಖಂಡರಾದ ಸಿದ್ದಮಲಯ್ಯ, ಕಾಂತರಾಜು, ಶಿವಣ್ಣ, ಪ್ರಸಾದ್‌, ಕುಮಾರ, ರಾಜಪ್ಪ, ರಾಮನಾಯಕ, ರಾಜೇಂದ್ರ ಪ್ರಸಾದ್‌, ಎಇಇ, ಮಾದೇಶ್‌ ಎಂಜಿನಿಯರ್‌ ಲತಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next