Advertisement

ಖ್ಯಾತ ಬುಡಕಟ್ಟು ಕಲಾವಿದ ಜಿವ್ಯಾ ಸೋಮಾ ಮಾಶೆ ವಿಧಿವಶ

12:10 PM May 15, 2018 | Team Udayavani |

ಪಾಲಗಢ, ಮಹಾರಾಷ್ಟ್ರ : ವಾರ್ಲಿ ಬುಡಕಟ್ಟು ಕಲಾ ಪ್ರಕಾರವನ್ನು ಜನಪ್ರಿಯಗೊಳಿಸಿದ ಪ್ರಖ್ಯಾತ ಕವಾಲಿ ಜಿವ್ಯಾ ಸೋಮಾ ಮಾಶೆ ಅವರು ಇಂದು ನಿಧನ ಹೊಂದಿದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

Advertisement

ಮಾಶೆ ಅವರು ದಹಾಣು ತಾಲೂಕಿನ ತಮ್ಮ ನಿವಾಸದಲ್ಲಿ ನಿನ್ನೆ ತಡ ರಾತ್ರಿ ಕೊನೆಯುಸಿರೆಳೆದರು. ಮಾಶೆ ಅವರಿಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಅವರಿಗೆ 1976ರಲ್ಲಿ ಬುಡಕಟ್ಟು ಕಲೆಗೆ ನೀಡಿರುವ ಕಾಣಿಕೆಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ನೀಡಲಾಗಿತ್ತು.

ಮಾಶೆ ಅವರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮಾಶೆ ಅವರ ಅಂತ್ಯಕ್ರಿಯೆಯನ್ನು  ಸಕಲ ಸರಕಾರಿ ಗೌರವಗಳೊಂದಿಗೆ ಇಂದು ನಡೆಸಲಾಗುವುದು ಎಂದು ಪಾಲಗಢ ರೆಸಿಡೆಂಟ್‌ ಡೆಪ್ಯುಟಿ ಕಲೆಕ್ಟರ್‌ ನವನಾತ್‌ ಝರೇ ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next