Advertisement

ಕೋರ್ಟ್‌ನಲ್ಲಿ ಮುಜುಗರ: ಕೇಜ್ರಿವಾಲ್‌ ವಕೀಲ ಕೇಸಿನಿಂದ ಹಿಂದಕ್ಕೆ

04:58 PM Feb 16, 2018 | Team Udayavani |

ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ವಕೀಲ ಅನೂಪ್‌ ಜಾರ್ಜ್‌ ಚೌಧರಿ ಅವರು “ಆಪ್‌ ನಾಯಕನ ವಿರುದ್ಧ ವಿತ್ತ ಸಚಿವ ಅರುಣ್‌ ಜೇತ್ಲಿ ದಾಖಲಿಸಿರುವ 10 ಕೋಟಿ ರೂ.ಗಳ ಮಾನ ನಷ್ಟ ದಾವೆಯಲ್ಲಿ ನಾನಿನ್ನು ಕೋರ್ಟ್‌ನಲ್ಲಿ  ಕೇಜ್ರಿವಾಲ್‌ ಅವರನ್ನು ಪ್ರತಿನಿಧಿಸುವುದಿಲ್ಲ’ ಎಂದು ಪತ್ರ ಮೂಲಕ ತಿಳಿಸಿದ್ದಾರೆ.

Advertisement

ಕೇಜ್ರಿವಾಲ್‌ ಕೇಸಿನಿಂದ ತಾನು ಹಿಂದೆ ಸರಿಯುತ್ತಿರುವುದಾಗಿ ಹೇಳಿರುವ ಚೌಧರಿ ಅವರು “ಕೇಜ್ರಿವಾಲ್‌ ನನಗೆ ಕೊಟ್ಟಿರುವ ಅಪರ್ಯಾಪ್ತ ವಿವರಗಳಿಂದಾಗಿ ನಾನು ಫೆ.12ರಂದು ಕೋರ್ಟಿನಲ್ಲಿ ಇರಿಸು ಮುರಿಸಿನ ಸ್ಥಿತಿಯನ್ನು ಎದುರಿಸಬೇಕಾಗಿ ಬಂತು’ ಎಂದು ಹೇಳಿದ್ದಾರೆ.

ಚೌಧರಿ ಅವರಿಗಿಂತ ಮೊದಲು ರಾಮ್‌ ಜೇಠ್ಮಲಾನಿಅವರು ಕೂಡ ಕೇಜ್ರಿವಾಲ್‌ ಕೇಸಿನಲ್ಲಿ ತಾನಿನ್ನು ಕೋರ್ಟಿಗೆ ಹಾಜರಾಗುವುದಿಲ್ಲ ಎಂದು ಹೇಳಿದ್ದರು. ತಾನು ಅರುಣ್‌ ಜೇತ್ಲಿ ಗೆ “ಕ್ರೂಕ್‌’ ಎಂದು ಕರೆಯುವಂತೆ ಹೇಳಿಲ್ಲ ಎಂದು ಕೇಜ್ರಿವಾಲ್‌ ಸುಳ್ಳು ಹೇಳಿರುವ ಕಾರಣ ತಾನು ಕೇಸಿನಿಂದ ಹಿಂದೆ ಸರಿಯುತ್ತಿರುವುದಾಗಿ ಜೇಠ್ಮಲಾನಿ ನೀಡಿದ್ದರು. 

ಮಾತ್ರವಲ್ಲದೆ ಕೇಜ್ರಿವಾಲ್‌ಗೆ ನಾನು ಚಾರ್ಜ್‌ ಮಾಡಿದ್ದ 2 ಕೋಟಿ ರೂ. ಶುಲ್ಕವನ್ನು ಮಾಫಿ ಮಾಡಬಲ್ಲೆ; ಏಕೆಂದರೆ ನಾನು ಸಾವಿರಾರು ಜನರಿಗೆ ಉಚಿತವಾಗಿ ವಕಾಲತ್‌ ಮಾಡಿದವನಾಗಿದ್ದೇನೆ ಎಂದು ಜೇಠ್ಮಲಾನಿ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next