Advertisement

Elon Muskಸಾಲದ ಸುಳಿಯಲ್ಲಿದೆ ಜಾಲತಾಣ ದೈತ್ಯ  ಟ್ವಿಟರ್‌!

09:36 PM Jul 16, 2023 | Team Udayavani |

ನವದೆಹಲಿ: ಜಾಲತಾಣ ದೈತ್ಯ ಟ್ವಿಟರ್‌ನ ಒಡೆತನ ಹೊಂದಿದಾಗಿನಿಂದಲೂ ಒಂದಿಲ್ಲೊಂದು ಬದಲಾವಣೆಗಳನ್ನು ತರುತ್ತಲೇ ಇರುವ ಎಲಾನ್‌ ಮಸ್ಕ್ ಈಗ ಸಂಸ್ಥೆ ನಷ್ಟದಲ್ಲಿದ್ದು, ದಿನಂಪ್ರತಿ ಸಾಲ ಹೆಚ್ಚುತ್ತಲೇ ಇದೆ ಎಂದು ಹೇಳಿಕೊಂಡಿದ್ದಾರೆ.

Advertisement

ವ್ಯಾಪಾರ ಸಲಹೆ ನೀಡುವ ಕುರಿತಾದ ಟ್ವೀಟ್‌ ಒಂದಕ್ಕೆ ಪ್ರತಿಕ್ರಿಯಿಸುವ ವೇಳೆ ಮಸ್ಕ್ ಈ ವಿಚಾರ ತಿಳಿಸಿದ್ದಾರೆ. ವೇದಿಕೆಗೆ ಮತ್ತಷ್ಟು ಐಷಾರಾಮಿ ಬದಲಾವಣೆಗಳನ್ನು ಪರಿಚಯಿಸುವ ಮೊದಲು, ನಗದು ಹರಿವನ್ನು ಖಚಿತಪಡಿಸಿಕೊಳ್ಳಬೇಕಿದೆ.

ಟ್ವಿಟರ್‌ಗೆ ಜಾಹೀರಾತು ಸಮಸ್ಯೆ ಎದುರಾಗಿರುವ ಹಿನ್ನೆಲೆ ಸಾಲ ಹೆಚ್ಚುತ್ತಿದೆ ಎಂದಿದ್ದಾರೆ. ಇದೇ ವೇಳೆ, ಸಮಸ್ಯೆ ಸರಿದೂಗಿಸುವ ನಿಟ್ಟಿನಲ್ಲಿ ವಿವಿಧ ಕಾರಣಗಳಿಂದ ನಿರ್ಬಂಧಿಸಲಾಗಿದ್ದ ಖ್ಯಾತನಾಮರ ಖಾತೆಗಳನ್ನು ಮತ್ತೆ ಅನುಮತಿಸುವ ಮೂಲಕ ಜಾಹೀರಾತು ಸೆಳೆತಕ್ಕೂ ಟ್ವಿಟರ್‌ ಮುಂದಾಗಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next