Advertisement

ಸುಗಂಧ ದ್ರವ್ಯ ಮಾರಾಟಕ್ಕಿಳಿದ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್: 1 ಬಾಟಲಿ ಬೆಲೆ…

05:30 PM Oct 12, 2022 | Team Udayavani |

ವಾಷಿಂಗ್ಟನ್:‌ ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್‌ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಾಕುವ ಪೋಸ್ಟ್‌ ಗಳು ಚರ್ಚೆಗಳನ್ನು ಹುಟ್ಟು ಹಾಕುತ್ತವೆ. ಸದ್ಯ ಅವರು ಹಾಕಿರುವ ಟ್ವೀಟ್‌ ವೊಂದು ವೈರಲ್‌ ಆಗಿದೆ.

Advertisement

ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಂದಾಗಿರುವ ಎಲಾನ್‌ ಮಸ್ಕ್‌ ಈಗ ಸುಗಂಧ ದ್ರವ್ಯ ಮಾರುವ ವ್ಯಕ್ತಿಯಾಗಿದ್ದಾರೆ.! ಅಚ್ಚರಿಯಾದರೂ ಇದು ಸತ್ಯ. ಈ ಬಗ್ಗೆ ಟ್ವಟರ್‌ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

“ನನ್ನಂತಹ ಹೆಸರಿನೊಂದಿಗೆ, ಸುಗಂಧ ವ್ಯಾಪಾರಕ್ಕೆ ಬರುವುದು ಅನಿವಾರ್ಯವಾಗಿತ್ತು – ನಾನು ಯಾಕೆ ಇಷ್ಟು ದಿನ ಹೋರಾಡಿದೆ!?” ಎಂದು ಟ್ವೀಟ್‌ ನಲ್ಲಿ ಎಲಾನ್‌ ಬರೆದುಕೊಂಡಿದ್ದಾರೆ. ಎಲಾನ್‌ ತಮ್ಮ ಸುಗಂಧ ದ್ರವ್ಯದ ಉತ್ಪನ್ನಕ್ಕೆ “ಬರ್ನ್ಟ್ ಹೇರ್” ( Burnt Hair)‌ ಎಂದು ಹೆಸರಿಟ್ಟಿದ್ದಾರೆ.

ಎಲಾನ್‌ ತಮ್ಮ ಟ್ವಟಿರ್‌ ಬಯೋದಲ್ಲಿ ಸುಗಂಧ ದ್ರವ್ಯ ಮಾರಾಟಗಾರ ಎಂದು ಹಾಕಿಕೊಂಡಿದ್ದಾರೆ. ಇದರೊಂದಿಗೆ ಇದು ಭೂಮಿಯ ಮೇಲಿನ ಅತ್ಯುತ್ತಮ ಸುಗಂಧ ಎಂದು ಮಸ್ಕ್‌ ಹೇಳಿಕೊಂಡಿದ್ದಾರೆ.

ಪ್ರಾಡಕ್ಟ್‌ ಬಿಡುಗಡೆಯಾದ ಒಂದು ಗಂಟೆಯೊಳಗೆ 10 ಸಾವಿಕ್ಕೂ ಹೆಚ್ಚಿನ “ಬರ್ನ್ಟ್ ಹೇರ್” ಬಾಟಲಿಗಳು ಮಾರಾಟವಾಗಿದೆ. ಇದನ್ನು ಗಂಡು – ಹೆಣ್ಣು ಎನ್ನದೇ ಎಲ್ಲರೂ ಉಪಯೋಗಿಸಬಹುದು. ಎಲ್ಲರ ಉಪಯೋಗಕ್ಕೆ ಇದು ಬರುತ್ತದೆ ಎಂದು ಮಸ್ಕ್‌ ತಿಳಿಸಿದ್ದಾರೆ.

Advertisement

ವರದಿಯ ಪ್ರಕಾರ ಒಂದು ಬಾಟಲ್‌ ಫರ್ಮ್ಯೂಗೆ $100 (8,400 ರೂ.) ಬೆಲೆಯಿದೆ. ಕ್ರಿಪ್ಟೋ ಕೆರೆನ್ಸಿ ಮೂಲಕವೂ ಬರ್ನ್ಟ್ ಹೇರ್ ನ್ನು ಖರೀದಿಸಬಹುದು ಎಂದು ಎಲಾನ್‌ ಮಾಸ್ಕ್‌ ಹೇಳಿದ್ದಾರೆ.

ಈ ಬಗ್ಗೆ ನೆಟ್ಟಿಗರು ಎಲಾನ್‌ ಮಸ್ಕ್‌ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ. ಇದರೊಂದು ಅತ್ಯಂತ ಕೆಟ್ಟ ಹೆಸರೆಂದು ಟ್ವಿಟರ್‌ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next