ರಾಮನಗರ: ಜಿಲ್ಲೆಯ ಚನ್ನಪಟ್ಟಣ ನಗರ ಸಮೀಪದ ಅಪ್ಪಕೆರೆ ಗ್ರಾಮದ ಕೆರೆಯಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಗಜಪಡೆಯ ನೀರಾಟ ನೋಡಲು ಜನರು ಮುಗಿಬಿದ್ದಿದ್ದಾರೆ.
ತೆಂಗಿನ ಕಲ್ಲಿ ಅರಣ್ಯ ಪ್ರದೇಶದಿಂದ ನಗರದತ್ತ ಬಂದಿರುವ ಗಜಪಡೆಯು ಚನ್ನಪಟ್ಟಣ ನಗರದಿಂದ ಕೇವಲ 1 ಕಿ.ಮೀ ದೂರದಲ್ಲಿ ಬೀಡುಬಿಟ್ಟಿವೆ.
ಇದನ್ನೂ ಓದಿ:Chandrayaan 3: ಶಿಶಿರನ ಮೇಲಿನ ನೀರನ್ನು ಯಾಕೆ ಹುಡುಕಬೇಕು? ಅದಕ್ಕೆ ಯಾಕಿಷ್ಟು ಮಹತ್ವ?
ಅಪ್ಪಕೆರೆ ಕೆರೆಯಲ್ಲಿ ಆರು ಆನೆಗಳಿದ್ದು, ನಗರದತ್ತ ಬಂದ ಆನೆಗಳನ್ನು ಕಂಡು ಚನ್ನಪಟ್ಟಣದ ಜನತೆ ಭಯಭೀತರಾಗಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಕಾಡಾನೆಗಳ ಸಮೀಪ ಹೋಗದಂತೆ ಜನರಿಕೆ ಎಚ್ಚರಿಕೆ ನೀಡಿದ್ದಾರೆ. ರಾತ್ರಿ ವೇಳೆ ಕಾಡಾನೆಗಳನ್ನ ಕಾಡಿಗಟ್ಟಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ. ಅಲ್ಲಿಯವರೆಗೆ ಕೆರೆಯಲ್ಲೇ ಗಜಪಡೆ ವಾಸ್ತವ್ಯ ಹೂಡುವಂತೆ ನೋಡಿಕೊಳ್ಳುವುದಾಗಿ ಅರಣ್ಯಾಧಿಕಾರಿಗಳು ಹೇಳಿದ್ದಾರೆ.