Advertisement

ವಿದ್ಯುತ್‌ ಪರಿವರ್ತಕಗಳ ಬ್ಯಾಂಕ್‌ ಸ್ಥಾಪಿಸಿ: ಇಂಧನ ಸಚಿವ ಸುನಿಲ್‌

03:36 PM Oct 03, 2021 | Team Udayavani |

ಮೈಸೂರು: ವಿದ್ಯುತ್‌ ಪರಿವರ್ತಕಗಳ(ಟೀಸಿ) ಬ್ಯಾಂಕ್‌ ಪ್ರಾರಂಭಿಸುವಂತೆ ಕೆಪಿಟಿಸಿಎಲ್‌ನ ಅಧಿಕಾರಿಗಳಿಗೆ ಇಂಧನ ಸಚಿವ ವಿ. ಸುನಿಲ್‌ಕುಮಾರ್‌ ಸೂಚಿಸಿದರು. ನಗರದಲ್ಲಿ ಸೆಸ್ಕ್ ಆಯೋಜಿಸಿದ್ದ ವಿತರಣಾ ವಿದ್ಯುತ್‌ ಪರಿವರ್ತಕಗಳ ಜೀವನ ಚಕ್ರದ ವ್ಯವಸ್ಥಿತ ನಿರ್ವಹಣೆ ಕುರಿತು ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ನಾವು ಏನೆಲ್ಲಾ ಕೆಲಸಗಳನ್ನು ಸರಿಯಾಗಿ ಮಾಡಿದ್ದರೂ,ಟೀಸಿ ಬಳಕೆ ಮತ್ತು ನಿರ್ವಹಣೆಯಲ್ಲಿ ಎಡವಿದರೆ ಎಲ್ಲಾ ಶ್ರಮ ವ್ಯರ್ಥವಾಗುತ್ತದೆ. ಇದರ ಪರಿಣಾಮವನ್ನು ಜನರು ಮತ್ತು ರೈತರು ಎದುರಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಪರಿವರ್ತಕಗಳ ನಿರ್ವಹಣೆ ಅಚ್ಚುಕಟ್ಟಾಗಿ ಮತ್ತು ಕೇಂದ್ರೀಕೃತವಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ವಿದ್ಯುತ್‌ ಪರಿವರ್ತಕಗಳ ದೊಡ್ಡ ಬ್ಯಾಂಕ್‌ ಪ್ರಾರಂಭಿಸಿ. ಅವುಗಳ ದುರಸ್ತಿ ಕೇಂದ್ರ ಹೆಚ್ಚಿಸಿ, ಒಂದು ವಿಭಾಗ ಅಥವಾ ಉಪ ವಿಭಾಗದ ಮೇಲೆ ಅವಲಂಬಿತರಾಗಬೇಡಿ.

ಇದನ್ನೂ ಓದಿ:-ಡಿಸಿಸಿ ಬ್ಯಾಂಕ್‌ ಶಾಖೆಗೆ ನುಗಿದ ಮಳೆ ನೀರು

ಈ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ಇನ್ನು ಟೀಸಿ ಪೂರೈಕೆಗೆ ಅಗತ್ಯವಿರುವ ವಾಹನಕ್ಕೆ ಟೆಂಡರ್‌ ಕರೆಯಲಾಗಿದ್ದು, ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಯನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದರು.

Advertisement

ಸಾರ್ವಜನಿಕರು ದೂರು ನೀಡಿದ 24 ಗಂಟೆ ಒಳಗಾಗಿ ವಿದ್ಯುತ್‌ ಪರಿವರ್ತಕಗಳನ್ನು ಬದಲಿಸಬೇಕು. ಈ ಸಂಬಂಧ ಇರುವ ತೊಡಕನ್ನು ಅ. 15ರೊಳಗೆ ಬಗೆಹರಿಸಿಕೊಳ್ಳಬೇಕು. ಬಳಿಕ ದೂರು ಬಂದ ಒಂದು ದಿನದೊಳಗೆ ಬದಲಿಸಬೇಕು ಎಂದರು. ಸೆಸ್ಕ್ ಎಂಡಿ ಜಯವಿಭವಸ್ವಾಮಿ ಇದಕ್ಕೂ ಮುನ್ನ ಪ್ರಾಸ್ತಾವಿಕ ಭಾಷಣ ಮಾಡಿದರು.

ಮೈಸೂರಿನ ತಂತ್ರಜ್ಞಾನ ರಾಜ್ಯಕ್ಕೆ ವಿಸ್ತರಣೆ-  ವಿದ್ಯುತ್‌ ಪರಿವರ್ತಕಗಳ ನಿರ್ವಹಣೆಗೆ ಅಳವಡಿಸಲಾದ ನೂತನ ತಂತ್ರಜ್ಞಾನವು ಮೈಸೂರಿನಲ್ಲಿ ಈಗಾಗಲೇ ಜಾರಿಯಲ್ಲಿದ್ದು, ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು ಎಂಬ ಉದ್ದೇಶವಿದೆ. ಇದರಲ್ಲಿ ರಾಜ್ಯದ ಬೇರೆ ಬೇರೆ ಭಾಗದಿಂದ ಆನ್‌ಲೈನ್‌ ಮೂಲಕ ಪಾಲ್ಗೊಂಡ ಹಿರಿಯ ಅಧಿಕಾರಿಗಳಿದ್ದು, ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next