ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಸೋಮವಾರ ಸಂಜೆ ಮುನ್ನಗೌಡನ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿರುವ ವೇಳೆ ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ಸಾವನ್ನಪ್ಪಿದ ಘಟನೆ ಜರುಗಿದೆ.
ರೈತ ಬಸ್ಸಪ್ಪ(30) ತನ್ನ ಎತ್ತಿನೊಂದಿಗೆ ಹೋಗುತ್ತಿರುವಾಗ ಎತ್ತಿನ ಕಾಲಿಗೆ ತಂತಿ ಸಿಲುಕಿದ್ದನ್ನು ಕಂಡು ಬಿಡಿಸಲು ಮುಂದಾಗಿದ್ದ ಈ ವೇಳೆ ವಿದ್ಯುತ್ ಹರಿದಿದೆ.
ಸ್ವಲ್ಪ ದೂರದಲ್ಲಿ ಬರುತ್ತಿದ್ದ ರೈತ ಮೌಲಾನಸಾಬ(28) ಸಹಾಯಕ್ಕೆ ತೆರಳಿದಾಗ ಆತನಿಗು ವಿದ್ಯುತ್ ತಗುಲಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಜಾನುವಾರಿನೊಂದಿಗೆ ಮುನ್ನಗೌಡನ ಜಮೀನು ದಾಟುತ್ತಿರುವ ಸಂದರ್ಭದಲ್ಲಿ ಅವರ ಕೃಷಿ ಪಂಪ್ ಸೆಟ್ ವಿದ್ಯುತ್ ಸರ್ವಿಸ್ ವೈರ್ ಕಡಿದು ತಂತಿ ಬೇಲಿನ ಮೇಲೆ ಬಿದ್ದಿತ್ತು ಎನ್ನಲಾಗಿದೆ.
ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.