Advertisement

ಪಕ್ಷಗಳಲ್ಲಿ ಪಾರದರ್ಶಕತೆಗಾಗಿ ಬಾಂಡ್‌

11:05 AM Jan 08, 2018 | Karthik A |

ಹೊಸದಿಲ್ಲಿ: ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹ ಹಾಗೂ ವೆಚ್ಚದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಪಕ್ಷಗಳ ಬಾಂಡ್‌ ಬಗ್ಗೆ ವಿತ್ತ ಸಚಿವ ಅರುಣ್‌ ಜೇಟ್ಲಿ ಪ್ರಸ್ತಾವಿಸಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ಚುನಾವಣೆಯಲ್ಲಿ ನಗದು ವೆಚ್ಚ ಹಾಗೂ ರಾಜಕೀಯ ಪಕ್ಷಗಳಲ್ಲಿನ ಪಾರದರ್ಶಕತೆಗೆ ಇದು ಉತ್ತಮ ವಿಧಾನ ಎಂದಿದ್ದಾರೆ. ಅಲ್ಲದೆ ಸಾರ್ವಜನಿಕರು ಇದರ ಸುಧಾರಣೆಗೆ ಸಲಹೆ‌ಯನ್ನೂ ನೀಡಬಹುದು ಎಂದು ಅವರು ಹೇಳಿದ್ದಾರೆ.

Advertisement

ಸದ್ಯ ಪಕ್ಷಗಳು ಸಂಗ್ರಹಿಸುವ ದೇಣಿಗೆ ಮೂಲವೇ ತಿಳಿದಿರುವುದಿಲ್ಲ. ಜತೆಗೆ ಅನುಮಾನಾಸ್ಪದವಾಗಿರುತ್ತವೆ. ಎಲ್ಲಿಂದ ಹಣ ಸಂಗ್ರಹಿಸಲಾಯಿತು, ಎಷ್ಟು ಸಂಗ್ರಹಿಸಲಾಯಿತು ಎಂದೂ ತಿಳಿಯುವುದಿಲ್ಲ. ಈ ವಿಧಾನದಲ್ಲಿ ಕಪ್ಪು ಹಣ ಹರಿದುಬರುವ ಅನುಮಾನ ವ್ಯಾಪಕವಾಗಿದೆ. ಇದೊಂದು ಸಂಪೂರ್ಣ ಅಪಾರದರ್ಶಕ ವ್ಯವಸ್ಥೆ. ಎಲ್ಲ ಪಕ್ಷಗಳೂ ಈ ವ್ಯವಸ್ಥೆಗೆ ಹೊಂದಿಕೊಂಡಿವೆ. ಆದರೆ ಈ ವ್ಯವಸ್ಥೆ ಬದಲಾಗಬೇಕಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next