ಹೊಸಪೇಟೆ: ವಿಜಯನಗರ ನೆಲದಿಂದಲೇ ಮುಂದಿನ ಚುನಾವಣೆ ರಣಕಹಳೆ ಮೊಳಗಲಿದೆ. ಬಲಿಷ್ಠ ವಿಜಯನಗರ ಸಾಮ್ರಾಜ್ಯದಂತೆ ದೇಶದೆಲ್ಲಡೆ ಬಿಜೆಪಿ ಪಕ್ಷವನ್ನು ವಿಸ್ತರಣೆಯಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಮಹೇಶ್ ತಂಗಿನಕಾಯಿ ಅವರುಗಳು ನುಡಿದರು.
ನಗರದಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ ವೇದಿಕೆ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪಕ್ಷ ಸಂಘಟನೆಯಲ್ಲಿ ಬಿಜೆಪಿ ಸದಾ ಮುಂಚೂಣಿಯಲ್ಲಿರಲಿದೆ. ಚುನಾವಣೆ ದೃಷ್ಟಿಯಿಟ್ಟುಕೊಂಡು ಬಿಜೆಪಿ ವಿಜಯನಗರದಲ್ಲಿ ಕಾರ್ಯಕಾರಣಿ ಸಭೆ ಆಯೋಜನೆ ಮಾಡುತ್ತಿಲ್ಲ. ಕಾರ್ಯಕಾರಣಿ ಸಭೆಯಲ್ಲಿ ಪಕ್ಷದ ಅಂತರಿಕ ವಿಚಾರಗಳು ಕುರಿತು ಚರ್ಚೆ ನಡೆಯಲಿದ್ದು, ವಿಚಾರಗಳನ್ನು ಬಹಿರಂಗ ಪಡಿಸಲು ಆಗುವುದಿಲ್ಲ
ಎಂದರು.
ಭೂಮಿಪೂಜೆ: ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಏ. 16 ಮತ್ತು 17ರಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯುವ ಹಿನ್ನೆಲೆಯಲ್ಲಿ ನಗರದ ಭಟ್ಟರಳ್ಳಿ ಆಂಜನೇಯ ದೇವಾಲಯ ಹತ್ತಿರ ವೇದಿಕೆ ನಿರ್ಮಾಣಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ರಾಜ್ಯ ಮುಖ್ಯ ವಕ್ತಾರ ಮಹೇಶ್ ತಂಗಿನಕಾಯಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಸೋಮವಾರ ಸಾಮೂಹಿಕವಾಗಿ ಭೂಮಿಪೂಜೆ ನೆರವೇರಿಸಿದರು. ನಂತರ ಗಣ್ಯರು, ಗಣಪತಿ, ನವಗ್ರಹ ಹಾಗೂ ವಾಸ್ತು ಪೂಜೆ ನೆರವೇರಿಸಿದರು.
ವಿಜಯನಗರ ಸಾಮ್ರಾಜ್ಯದಂತೆ ಬಿಜೆಪಿಯನ್ನು ದೇಶದೆಲ್ಲಡೆ ವಿಸ್ತರಣೆ ಮಾಡಲಾಗುತ್ತದೆ. ರಾಜಕೀಯ ವಲಯದಲ್ಲಿ ಚೆರ್ಚೆಗೆ ಕಾರಣವಾಗಿದ್ದು, ಸಭೆಯಲ್ಲಿ ಹಿಜಾಬ್, ಧಾರ್ಮಿಕ ಸ್ಥಳದಲ್ಲಿ ಅಂಗಡಿ ನಿಯೋಜನೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಡಾ| ರಮೇಶ್ ಕುಮಾರ್, ಮಾಧ್ಯಮ ಸಂಚಾಲಕ ಸತ್ಯನಾರಾಯಣ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಅರುಣಾ, ಸುಗುಣ ಹಾಗೂ ಮುಖಂಡರಾದ ಧಮೇಂದ್ರ ಸಿಂಗ್, ಸಿದ್ಧಾರ್ಥ ಸಿಂಗ್ ಹಾಗೂ ಸಂದೀಪ್ ಸಿಂಗ್ ಇನ್ನಿತರರಿದ್ದರು.