Advertisement
4 ಗ್ರಾಪಂ ಎಲ್ಲಲ್ಲಿ? ಅವಧಿ ಮುಗಿದ ಗ್ರಾಪಂಗಳ ಪೈಕಿ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಭಕ್ತರಹಳ್ಳಿ ಗ್ರಾಪಂನಲ್ಲಿ ಒಟ್ಟು 10 ಸದಸ್ಯ ಕ್ಷೇತ್ರಗಳು, ಮಳಮಾಚನಹಳ್ಳಿ ಗ್ರಾಪಂ (14), ಹೊಸಪೇಟೆ ಗ್ರಾಪಂ (17) ಹಾಗೂ ನಾಗಮಂಗಲ ಗ್ರಾಪಂ (7) ಸದಸ್ಯ ಸ್ಥಾನಗಳು ಸೇರಿ ಒಟ್ಟು 48 ಗ್ರಾಪಂ ಸದಸ್ಯ ಸ್ಥಾನಗಳಿಗೆ ಜನವರಿ 2 ರಂದು ಚುನಾವಣೆ ನಡೆಯಲಿದೆಯೆಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ತಿಳಿಸಿದ್ದಾರೆ.
ಚುನಾವಣಾ ವೇಳಾ ಪಟ್ಟಿ ಹೀಗಿದೆ: ಡಿ.17 ರಿಂದ 20ರ ಮದ್ಯಾಹ್ನ 3 ಗಂಟೆಯವರೊ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಬಹುದಾಗಿದೆ. ಡಿ.21 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ಡಿ.24 ರಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ, ಅವಶ್ಯಕತೆ ಇದ್ದಲ್ಲಿ ಜನವರಿ 2 ರಂದು ಬೆಳಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಮತದಾನ ನಡೆಯಲಿದೆಯೆಂದು ಡೀಸಿ ಅನಿರುದ್ಶ್ರವಣ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಜ. 2 ರಂದು ನಡೆಯುವ ವಿವಿಧ ಗ್ರಾಪಂಗಳ ಚುನಾವಣೆಯ ಮತ ಎಣಿಕೆಯನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ಜನವರಿ 4 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ನಡೆಸಿ ಎಣಿಕೆ ಬಳಿಕ ಫಲಿತಾಂಶ ಪ್ರಕಟಗೊಳ್ಳಲಿದೆ. ಜಿಲ್ಲೆಯಲ್ಲಿ ಅವಧಿ ಮುಗಿಯಲಿರುವ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ, ಮಳಮಾಚನಹಳ್ಳಿ, ಹೊಸಪೇಟೆ ಮತ್ತು ನಾಗಮಂಗಲ ಒಟ್ಟು 48 ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಹಾಗು ವಿವಿಧ ಕಾರಣಗಳಿಂದ ತೆರವಾಗಿರುವ 6 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ಜನವರಿ 2 ರಂದು ನಿಗಧಿಪಡಿಸಲಾಗಿದೆ. ಜ.4ಕ್ಕೆ ಚುನಾವಣಾ ಫಲಿತಾಂಶ ಹೊರ ಬರಲಿದೆ. ಈ ಬಾರಿ ಅವಧಿ ಮುಗಿದ ಗ್ರಾಪಂಗಳಲ್ಲಿ ಮಲ್ಟಿಚಾಯ್ಸ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿ ಚುನಾವಣೆ ನಡೆಸಲಾಗುತ್ತಿದೆ.
ಅನಿರುದ್ಧ ಶ್ರವಣ್, ಜಿಲ್ಲಾಧಿಕಾರಿ