Advertisement
ಶಿವಸೇನೆಯ ಮುಖ್ಯಸ್ಥ ಏಕನಾಥ್ ಶಿಂಧೆ ಸಹ ನಾನೂ ಆಕಾಂಕ್ಷಿ ಎಂದಿದ್ದರಿಂದ, ಫಲಿತಾಂಶ ಬಂದು 2 ದಿನ ವಾದರೂ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿಯೇ ಉಳಿದುಕೊಂಡಿದೆ. ಫಡ್ನವೀಸ್, ಶಿಂಧೆ, ಅಜಿತ್ ಪವಾರ್ರನ್ನು ಕೇಂದ್ರ ಸಚಿವ ಅಮಿತ್ ಶಾ ಅವರು ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದು, 2 -3 ದಿನಗಳಲ್ಲೇ ಪ್ರಮಾಣ ಸ್ವೀಕಾರ ನಡೆಯಲಿದೆ ಎಂದೂ ಮೂಲಗಳು ತಿಳಿಸಿವೆ.
ಫಡ್ನವೀಸ್ಗೆ ಮುಖ್ಯಮಂತ್ರಿ ಹುದ್ದೆ ನೀಡಿದರೆ, ಶಿಂಧೆ ಹಾಗೂ ಅಜಿತ್ ಪವಾರ್ಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಪ್ರಮುಖ ಖಾತೆಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು, ಬಿಜೆಪಿ 21 ಖಾತೆಗಳನ್ನು ಉಳಿಸಿಕೊಂಡು, ಅಜಿತ್ ಪಕ್ಷಕ್ಕೆ 10, ಶಿಂಧೆ ಪಕ್ಷಕ್ಕೆ 12 ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆ ಇದೆ. ಇದೇ ವೇಳೆ ಫಡ್ನವೀಸ್ಗೆ ಬೆಂಬಲ ಸೂಚಿಸುವಂತೆ ಅಜಿತ್ ಪವಾರ್ ಎಲ್ಲ ಶಾಸಕರಿಗೂ ಸೂಚಿಸಿದ್ದಾರೆ ಎನ್ನಲಾಗಿದೆ.