Advertisement
ಕಾಂಗ್ರೆಸ್
Related Articles
ವಾರ್ ರೂಂ ನಿರ್ವಹಣೆಗೆ 500ಕ್ಕೂ ಹೆಚ್ಚು ಸಿಬಂದಿ ಕೆಲಸ ಮಾಡುತ್ತಿದ್ದಾರೆ. ಐಟಿ ವಲಯದಲ್ಲಿ ಅನುಭವ ಇರುವವರ ಸಹಿತ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿವಳಿಕೆ ಉಳ್ಳವರು ಆಯಾ ದಿನದ ಬೇರೆ ಬೇರೆ ಪಕ್ಷಗಳ ಸಭೆ, ಸಮಾರಂಭ, ನಾಯಕರ ಹೇಳಿಕೆ ಗಮನಿಸಿ ಅದಕ್ಕೆ ತಕ್ಕಂತೆ ಕಾಂಗ್ರೆಸ್ ನಾಯಕರ ಅಭಿಪ್ರಾಯ ಪಡೆದು ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್, ವಾಟ್ಸ್ ಆಪ್ ಮೂಲಕ ಕಳುಹಿಸುವ ಕೆಲಸ ಮಾಡುತ್ತಿರುತ್ತಾರೆ.
Advertisement
– ಎಸ್. ಲಕ್ಷ್ಮೀನಾರಾಯಣ**
ಬಿಜೆಪಿ ಕಳೆದ ಚುನಾವಣೆಯಲ್ಲಿ ಜಾಲತಾಣವೂ ಸೇರಿದಂತೆ ಬಿಜೆಪಿಯ ತಂತ್ರಗಾರಿಕೆಯ ನಿರ್ವಹಣೆ ಮಾಡಿದ್ದು “ಎಬಿಎಂ’ (ಅಸೋಸಿಯೇಶನ್ ಆಫ್ ಬಿಲಿಯನ್ ಮೈಂಡ್), ಈ ಬಾರಿ ರಾಜ್ಯದಲ್ಲಿ ಬಿಜೆಪಿಯ ಚುನಾವಣ ಅಭಿಯಾನ ನಡೆಸುವ ಹೊಣೆಗಾರಿಕೆಯನ್ನು “ವಾರಾಹಿ’ ಎಂಬ ಸಂಸ್ಥೆಗೆ ನೀಡಲಾಗಿದೆ. ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆ, ಸರ್ವೇ, ಅಭಿಯಾನದ ನಿರ್ವಹಣೆ ಹೊತ್ತಿದ್ದ ಈ ಸಂಸ್ಥೆ ಈಗ ಕರ್ನಾಟಕದಲ್ಲೂ ಕೆಲಸ ನಿರ್ವಹಿಸುತ್ತಿದೆ. ಬಿಜೆಪಿ ಮೂಲಗಳ ಪ್ರಕಾರ ಸುಮಾರು 200ಕ್ಕೂ ಹೆಚ್ಚು ಸಿಬಂದಿ ಈ ಸಂಸ್ಥೆಯ ಅಡಿಯಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಬಿಜೆಪಿಯ ಸಾಮಾಜಿಕ ಜಾಲ ಘಟಕ ಕೇವಲ ಪಕ್ಷದ ಚಟುವಟಿಕೆಗೆ ಮಾತ್ರ ಸೀಮಿತವಾಗಿದೆ. ವಾರಾಹಿ ಜತೆಗೆ “ಚಾರ್ವಿಸ್’ ಎಂಬ ದಿಲ್ಲಿ ಮೂಲದ ಸಂಸ್ಥೆಯೂ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಡೇಟಾ ಆಧರಿತ ಕಾಲ್ ಸೆಂಟರ್ ನಿರ್ವಹಣೆ ಮಾಡುತ್ತಿದೆ. ಹಲವು ವರ್ಷಗಳಿಂದ ಬಿಜೆಪಿಯ ಚುನಾವಣ ಸಂಬಂಧಿ ಡೇಟಾ ವಿಶ್ಲೇಷಣೆಯನ್ನು ರಾಷ್ಟ್ರಮಟ್ಟದಲ್ಲಿ ಇದೇ ಸಂಸ್ಥೆ ನಿರ್ವಹಿಸುತ್ತಿದೆ. ಇಂಥ ಸಂಸ್ಥೆಗಳ ನಿರ್ವಹಣೆ ರಾಜಕೀಯ ಪಕ್ಷಗಳಿಗೆ ಸುಲಭವಲ್ಲ, ತಂತ್ರಜ್ಞರು, ವೃತ್ತಿಪರರು, ಸೃಜನಶೀಲರ ತಂಡ ಇಲ್ಲಿ ಕೆಲಸ ಮಾಡುವುದರಿಂದ ವೇತನ, ಮಾನವ ಸಂಪನ್ಮೂಲ ನಿರ್ವಹಣೆ ಇತ್ಯಾದಿ ತುಟ್ಟಿಯಾಗಿಯೇ ಇರುತ್ತದೆ. ಮೂಲಗಳ ಪ್ರಕಾರ ಬಿಜೆಪಿ ಈ ಉದ್ದೇಶಕ್ಕಾಗಿ ನೂರಾರು ಕೋಟಿ ರೂ. ವೆಚ್ಚ ಮಾಡುತ್ತಿದೆ. – ರಾಘವೇಂದ್ರ ಭಟ್
**
ಜೆಡಿಎಸ್ ಪಂಚರತ್ನ ಯಾತ್ರೆ, ಜನತಾ ಜಲಧಾರೆ ಕಾರ್ಯಕ್ರಮದ ಜತೆಗೆ ಕನ್ನಡಿಗರು, ಕನ್ನಡತನ ಮತ್ತು ಪ್ರಾದೇಶಿಕ ಅಸ್ಮಿತೆಯನ್ನು ಮೂಲವಾಗಿರಿಸಿ ಜೆಡಿಎಸ್ ಸಾಮಾಜಿಕ ಮಾಧ್ಯಮ ನಿರ್ವಹಿಸಲ್ಪ ಡುತ್ತಿದೆ. ಇದಕ್ಕೆ ಪಕ್ಷ ಸ್ವಂತ ಶಕ್ತಿಯನ್ನೇ ನೆಚ್ಚಿಕೊಂಡಿದೆ. ಸಾಮಾಜಿಕ ಮಾಧ್ಯಮ ನಿರ್ವಹಣೆಗೆ ವ್ಯವಸ್ಥಿತ ತಂಡ ಕಟ್ಟಿರುವ ಜೆಡಿಎಸ್ ರಾಜ್ಯ ಮಟ್ಟದ ಕೇಂದ್ರೀಕೃತ ತಂಡದಲ್ಲಿ 15ರಿಂದ 20 ಜನ ಇದ್ದಾರೆ. ಉಳಿದಂತೆ 300ರಿಂದ 400 ಜನರು ತಳಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಟಿಕೆಟ್ ಘೋಷಣೆ ಮಾಡಿರುವ ಒಂದೊಂದು ಕ್ಷೇತ್ರಕ್ಕೆ 5ರಿಂದ 10 ಮಂದಿಯನ್ನು ನಿಯೋಜಿಸಲಾಗಿದ್ದು, ದಿನವಹಿ ಆಧಾರದಲ್ಲಿ ಆಯಾ ಕ್ಷೇತ್ರದ ಆಗುಹೋಗುಗಳ ಮೇಲ್ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತ್ತಾರೆ. ಜತೆಗೆ ಟಿಕೆಟ್ ಘೋಷಣೆಯಾದ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಉಳಿದ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳೂ ಆವರದೇ ಆದ ಸಾಮಾಜಿಕ ಮಾಧ್ಯಮ ಬಳಸಿಕೊಳ್ಳುತ್ತಿದ್ದಾರೆ. ಇದರ ನಿರ್ವಹಣೆಗೆ ರಾಜ್ಯ ಮಟ್ಟದಲ್ಲಿ ಸುಸಜ್ಜಿತ “ವಾರ್ ರೂಂ’ ರಚಿಸಲಾಗಿದೆ. ಇದರ ಮೇಲ್ವಿಚಾರಣೆಯನ್ನು ನಿಖೀಲ್ ಕುಮಾರಸ್ವಾಮಿ ವಹಿಸಿದ್ದು, 15 ದಿನಕ್ಕೊಮ್ಮೆ ತಂಡದಲ್ಲಿರುವವರನ್ನು ಭೇಟಿ ಮಾಡಿ ಮಾಹಿತಿ ಪಡೆದು ಎಂದು ಮಾರ್ಗದರ್ಶನ ನೀಡುತ್ತಾರೆ. ಜತೆಗೆ ಎಚ್.ಡಿ. ಕುಮಾರಸ್ವಾಮಿ ಅವರಿಗೂ ನಿಯಮಿತವಾಗಿ ವರದಿ ಸಲ್ಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಇನ್ನಷ್ಟು ವಿಸ್ತರಿಸುವ, ಇನ್ನೂ ಹೆಚ್ಚಿನ ಜನರನ್ನು ನೇಮಕ ಮಾಡಿಕೊಳ್ಳುವ ಉದ್ದೇಶವಿದೆ ಎಂದು ಜೆಡಿಎಸ್ ಸಾಮಾಜಿಕ ಮಾಧ್ಯಮ ವಿಭಾಗದ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರತಾಪ್ ಕಣಗಲ್ ಹೇಳುತ್ತಾರೆ. – ರಫೀಕ್ ಅಹ್ಮದ್