Advertisement

ಅಭಿವೃದ್ಧಿ, ಜನಸಾಮಾನ್ಯರ ಕಲ್ಯಾಣಕ್ಕೆ ಶ್ರಮಿಸಿರುವೆ: ಸಚಿವ ಗೋಪಾಲಯ್ಯ

09:52 AM May 02, 2023 | Team Udayavani |

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್‌ನ ಬಿಜೆಪಿ ಅಭ್ಯರ್ಥಿ ಸಚಿವ ಕೆ. ಗೋಪಾಲಯ್ಯ ಮನೆ ಮನೆ ತೆರಳಿ, ಅಪಾರ್ಟ್‌ಮೆಂಟ್‌ ನಿವಾಸಿಗಳೊಂದಿಗೆ ಸಂವಾದ, ರೋಡ್‌ ಶೋ ನಡೆಸಿದರು. ಸೋಮವಾರ ಕ್ಷೇತ್ರದ ಜೆ.ಸಿ ನಗರದ ಕುರುಬರಹಳ್ಳಿಯ 1ನೇ ಮುಖ್ಯ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಕಲ್ಯಾಣಕ್ಕೆ ಹಗಲಿರುಳು ಶ್ರಮಿಸಿದ್ದೇನೆ. ವಿಧಾನಸೌಧದ ಒಳಗೆ ಮತ್ತು ಹೊರಗೆ ಕ್ಷೇತ್ರದ ವಿಚಾರವಾಗಿ ಸಚಿವನಾಗಿ ಮಾತನಾಡಿದ್ದೇನೆ. ಈ ಬಾರಿಯೂ ಬಹುಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ರೈಲ್ವೆ ನಾರಾಯಣ, ಶಿವಾನಂದಮೂರ್ತಿ, ಗೋವಿಂದ, ಯತಿರಾಜ್‌ ನಾಯ್ಡು, ಶಿಲ್ಪ ನಾಗರಾಜ್‌, ರಾಘವೇಂದ್ರ ನಾಗರಾಜ್‌ ಇತರರಿದ್ದರು. ಹಾಗೆಯೇ ಕ್ಷೇತ್ರದ ಫೀನಾಕ್ಷಿ ಅಪಾರ್ಟ್ಮೆಂಟ್‌ ನಿವಾಸಿಗಳೊಂದಿಗೆ ಸಭೆ ನಡೆಸಿದ ಗೋಪಾಲಯ್ಯ, ಅಲ್ಲಿನ ಜನರ ಬೇಡಿಕೆಗಳನ್ನು ಆಲಿಸಿ, ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನೀಡಿದರು.

ಇಂದು ಅಣ್ಣಾಮಲೈ ರೋಡ್‌ ಶೋ: ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಮಂಗಳವಾರ ಸಂಜೆ 5 ಗಂಟೆಗೆ ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. 60 ಅಡಿ ರಸ್ತೆ, ಜೆ ಸಿ ನಗರ, ಕುರುಬರಹಳ್ಳಿ ಯಿಂದ ರೋಡ್‌ ಶೋ ಪ್ರಾರಂಭವಾಗಿ ಸತ್ಯನಾರಾಯಣ ಕಲ್ಯಾಣ ಮಂಟಪ ಹತ್ತಿರ ಭಾಷಣದೊಂದಿಗೆ ಕೊನೆಗೊಳ್ಳಲಿದೆ. ರೋಡ್‌ ಶೋದಲ್ಲಿ ಕೆ.ಗೋಪಾಲಯ್ಯ, ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನರೇಂದ್ರಬಾಬು, ಬಿಬಿಎಂಪಿ ಮಾಜಿ ಉಪ ಮೇಯರ್‌ ಹೇಮಲತಾ ಗೋಪಾಲಯ್ಯ ಮುಂತಾದವರು ಭಾಗವಹಿಸಲಿದ್ದಾರೆ.

ಅಮೃತ ಕರ್ನಾಟಕಕ್ಕೆ ಭದ್ರ ಬುನಾದಿ: ಅನ್ನ, ಅಭಯ, ಅಕ್ಷರ, ಆರೋಗ್ಯ, ಅಭಿವೃದ್ಧಿ, ಆದಾಯ ಎಂಬ ಅಂಶಗಳ ಜತೆಗೆ 103 ಭರವಸೆಗಳ ಮೂಲಕ ನಾಡಿನ ಜನರಿಗೆ ಗುಣಮಟ್ಟದ ಬದುಕು ನೀಡಲಿರುವ ರಾಜ್ಯ ಬಿಜೆಪಿಯ ಪ್ರಣಾಳಿಕೆ ಬಿಡುಗಡೆಯಾಗಿದೆ. ಇದು ಅಮೃತ ಕರ್ನಾಟಕದ ನಿರ್ಮಾಣಕ್ಕೆ ಭದ್ರ ಬುನಾದಿಯಾಗಲಿದೆ ಎಂದು ಗೋಪಾಲಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next