Advertisement
ನಾರಾಯಣ ಗುರುಗಳು ಮೊದಲ ಬಾರಿಗೆ ಮಂಗಳೂರಿಗೆ ಬಂದಿಳಿದ ರೈಲು ನಿಲ್ದಾಣಕ್ಕೆ ಅವರ ಹೆಸರಿಟ್ಟಿರುತ್ತಿದ್ದರೆ ಗುರುಗಳಿಗೆ ಕೈ ಮುಗಿದಿರುವುದಕ್ಕೊಂದು ಅರ್ಥ ಬರುತ್ತಿತ್ತು. ಗಣರಾಜ್ಯೋತ್ಸವ ಸಂದರ್ಭ ನಾರಾಯಣ ಗುರುಗಳ ಟ್ಯಾಬ್ಲೋವನ್ನು ನಿರಾಕರಿಸಿರುವುದು, ಪಠ್ಯ ಪುಸ್ತಕದಿಂದ ಗುರುಗಳ ಪಠ್ಯವನ್ನು ತೆಗೆದು ಹಾಕಿರುವುದನ್ನು ನೋಡಿದಾಗ ಬಿಜೆಪಿಗೆ ನಾರಾಯಣ ಗುರುಗಳ ಬಗ್ಗೆ ಎಷ್ಟು ಗೌರವವಿದೆ ಎಂದು ತಿಳಿಯುತ್ತದೆ ಎಂದರು.
Related Articles
ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಮಂಗಳೂರಿಗೆ ಮೋದಿ ಬಂದು ಜಿಲ್ಲೆಯ ಜನರಿಗೆ ಸಂದೇಶ ಕೊಡುತ್ತಾರೆ ಎನ್ನುವ ವಿಶ್ವಾಸ ಜನರಲ್ಲಿತ್ತು. ಆದರೆ ಮೋದಿಯವರು ಒಂದೂ ಮಾತನಾಡದೆ ತೆರಳಿದ್ದಾರೆ. ಎಐಸಿಸಿ-ಕೆಪಿಸಿಸಿ ನಿರ್ದೇಶನದಂತೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿತ್ತು. ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ಜಿಲ್ಲೆಗೆ ಅವರ ಕೊಡುಗೆ ಏನು ಎಂದಾದರೂ ಹೇಳಬೇಕಿತ್ತು. ಆದರೆ ಅದನ್ನೂ ಹೇಳದೆ ಹೋಗಿದ್ದಾರೆ ಎಂದು ಆರೋಪಿಸಿದರು.
ಮುಖಂಡರಾದ ಟಿ.ಕೆ. ಸುಧೀರ್, ಶೈಲೇಂದ್ರ, ಕೃಷ್ಣಪ್ಪ, ಟಿ.ಎಂ. ಶಹೀದ್, ಶಾಲೆಟ್ ಪಿಂಟೋ, ಸಲೀಂ, ಯೋಗೀಶ್ ಕುಮಾರ್, ನೀರಜ್ ಪಾಲ್ ಉಪಸ್ಥಿತರಿದ್ದರು.
Advertisement