Advertisement

 ಚುನಾವಣಾ ಆಯೋಗದ 1950 ಸಹಾಯವಾಣಿ 

12:57 AM Mar 18, 2019 | |

ಬೆಂಗಳೂರು: ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲು ಮತ್ತು ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಲು ಸಾರ್ವಜನಿಕರಿಗಾಗಿ ಚುನಾವಣಾ ಆಯೋಗ “1950′ ಸಂಖ್ಯೆಯ ಸಹಾಯವಾಣಿ ಪ್ರಾರಂಭಿಸಿದ್ದು, ಅದು ಈಗಾಗಲೇ ಕಾರ್ಯಾಚರಣೆಯಲ್ಲಿದೆ.

Advertisement

ರಾಜ್ಯದ ಎಲ್ಲ 33 ಚುನಾವಣಾ ಜಿಲ್ಲೆಗಳಲ್ಲಿ ದಿನದ 24 ಗಂಟೆ ಈ ಸಹಾಯವಾಣಿ ಕೆಲಸ ಆರಂಭಿಸಿದೆ. ರಾಜ್ಯಮಟ್ಟದ ಸಹಾಯವಾಣಿಗೆ ಸಂಪರ್ಕಿಸಲು 1800 4255 1950 ಸಂಖ್ಯೆಯನ್ನು ಡಯಲ್‌ ಮಾಡಬೇಕು. ಜಿಲ್ಲಾಮಟ್ಟದಲ್ಲಿ ಆಯಾ ಜಿಲ್ಲೆಯ ಸಾರ್ವಜನಿಕರು ನೇರ ವಾಗಿ 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ದೂರುಗಳನ್ನು ನೀಡಬಹುದು ಅಥವಾ ಸಲಹೆಗಳನ್ನೂ ನೀಡಬಹುದು.

ಒಂದು ಜಿಲ್ಲೆಯಿಂದ ಮತ್ತೂಂದು ಜಿಲ್ಲೆಗೆ ಸಂಪರ್ಕಿಸಬೇಕಾದರೆ, ಸಾರ್ವಜನಿಕರು ತಾವು ಸಂಪರ್ಕಿಸಬೇಕಾದ ಜಿಲ್ಲೆ, ಎಸ್‌ಟಿಡಿ ಕೋಡ್‌ ಜೊತೆಗೆ ಸಹಾಯವಾಣಿ ಸಂಖ್ಯೆಗೆ ಡಯಲ್‌ ಮಾಡಬೇಕು. ರಾಜ್ಯಮಟ್ಟ ದ ಮತದಾರರ ಸಹಾಯವಾಣಿ ಕೇಂದ್ರದಲ್ಲಿ 10 ಆಪರೇಟರು ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಜಿಲ್ಲಾ ಸಹಾಯವಾಣಿ ಕೇಂದ್ರದಲ್ಲಿ ಕನಿಷ್ಠ 2 ಆಪರೇಟರುಗಳು ಪ್ರತಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಜಿಲ್ಲೆಯ ಸಹಾಯವಾಣಿ ಕೇಂದ್ರದಲ್ಲಿ 8 ಆಪರೇಟರುಗಳು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಹಾಯವಾಣಿ 1950ಗೆ ಕರೆ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಸಂಬಂಧಪಟ್ಟ ಮತಗಟ್ಟೆ, ಮತಗಟ್ಟೆಯಲ್ಲಿರುವ ಮೂಲಸೌಕರ್ಯಗಳು, ಮತಗಟ್ಟೆಯ ಅಂತರ ಮತ್ತಿತರರ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ, ಚುನಾವಣಾ ಅಕ್ರಮಗಳ ಬಗ್ಗೆಯೂ ದೂರು ನೀಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next