Advertisement

ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿದ ಐತಿಹಾಸಿಕ ರಾಮಪ್ಪ ದೇವಸ್ಥಾನ

09:37 PM Jul 25, 2021 | Team Udayavani |

ಹೈದರಾಬಾದ್: ತೆಲಂಗಾಣದ ಐತಿಹಾಸಿಕ ರಾಮಪ್ಪ ದೇವಸ್ಥಾನ ವಿಶ್ವ ಪರಂಪರೆ ತಾಣಕ್ಕೆ ಸೇರಿದೆ. ಯುನೆಸ್ಕೋ ಇದನ್ನು ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ.

Advertisement

ರಾಮಪ್ಪ ದೇವಾಲಯವು ಭಾರತದ ಅತ್ಯುತ್ತಮ ಶಿಲ್ಪಕಲೆಗಾಗಿ ಹೆಸರುವಾಸಿಯಾಗಿದೆ. ಚೀನಾದಲ್ಲಿ ನಡೆಸಿದ ವಿಶ್ವ ಪರಂಪರೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

12 ನೇ ಶತಮಾನದ ಕಾಕತಿಯನ್​ರ ವಾಸ್ತುಶಿಲ್ಪದ ಅದ್ಭುತವನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸುವುದಾಗಿ ಪ್ರಕಟಿಸಿದೆ.

ದೇವಸ್ಥಾನದ ವಿಶೇಷತೆ ?

ರಾಮಪ್ಪಾ ದೇವಸ್ಥಾನವು ಮುಲುಗು ಜಿಲ್ಲೆಯ ವೆಂಕಟಪುರ ಮಂಡಲದ ಪಾಲೆಂಪೆಟ್ ಗ್ರಾಮದಲ್ಲಿದೆ. ಇದು ಅಸಾಧಾರಣ ಶಿಲ್ಪಕಲೆಯನ್ನು ಹೊಂದಿದೆ. ಕಾಕತೀಯ ರಾಜರ ಕಾಲದಲ್ಲಿ ಈ ದೇವಾಲಯವನ್ನು 1213 ರಲ್ಲಿ ಪ್ರಸಿದ್ಧ ಶಿಲ್ಪಕಲೆ ರಾಮಪ್ಪ ಅವರ ಕಲಾ ಕೌಶಲ್ಯದಡಿಯಲ್ಲಿ ನಿರ್ಮಿಸಲಾಯಿತು.

Advertisement

ಇನ್ನು ರಾಮಪ್ಪಾ ದೇವಸ್ಥಾನಕ್ಕೆ ವಿಶ್ವ ಮಾನ್ಯತೆ ನೀಡಿದಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಸಂತಸ ವ್ಯಕ್ತಪಡಿಸಿದರು. ತೆಲಂಗಾಣ ಜನರಿಗೆ ಅಭಿನಂದನೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next