Advertisement
ಕೊಲೊಂಬೋ: ಆದಿತ್ಯವಾರ ಬೆಳಗ್ಗಿನಿಂದ ಶ್ರೀಲಂಕಾ ರಾಜಧಾನಿ ಕೊಲಂಬೋ ಸುತ್ತಮುತ್ತ ಎಂಟು ಕಡೆಗಳಲ್ಲಿ ಬಾಂಬ್ ಸ್ಪೋಟ ಸಂಭವಿಸಿದ್ದು ಇದುವರೆಗೂ 162 ಜನರು ಈ ದಾಳಿಗೆ ಪ್ರಾಣ ತೆತ್ತಿದ್ದಾರೆ. ದುರ್ಘಟನೆಯಲ್ಲಿ 400ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಇವರಲ್ಲಿ ವಿದೇಶಿಯರೂ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.ಮೂರು ಚರ್ಚ್‌ಗಳು ಮತ್ತು ಮೂರು ಪಂಚತಾರಾ ಹೊಟೇಲುಗಳು ಸೇರಿದಂತೆ ಒಟ್ಟು ಆರು ಕಡೆ ಸ್ಪೋಟ ಸಂಭವಿಸಿದ ಬಳಿಕ ಇದೀಗ ಮತ್ತೆರಡು ಕಡೆ ಬಾಂಬ್ ಸ್ಪೋಟ ನಡೆದಿರುವ ಕುರಿತಾಗಿ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅದರಲ್ಲಿ ಒಂದು ಸ್ಪೋಟ ದೆಹಿವಲಾ ಪ್ರದೇಶದಲ್ಲಿ ನಡೆದಿದ್ದರೆ ಇನ್ನೊಂದು ಸ್ಪೋಟ ಡೆಮಟಗೋಡಾ ಪ್ರದೇಶದಲ್ಲಿ ನಡೆದಿದೆ.
ಸ್ಪೋಟ ನಡೆದ ಸ್ಥಳದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಸಾಮಾಜಿಕ ಜಾಲತಾಣಗಳಾಗಿರುವ ಫೇಸ್ಬುಕ್ ಮತ್ತು ವಾಟ್ಸ್ಯಾಪ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.