Advertisement

ಎಂಟು ಸಾವಿರ ಕೆ.ಜಿ. ತರಕಾರಿ ವಿತರಣೆ

04:30 PM May 10, 2020 | Suhan S |

ಚಿಕ್ಕಬಳ್ಳಾಪುರ: ನಗರದಲ್ಲಿ ಕೋವಿಡ್  19 ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ನಗರದ 9ನೇ ವಾರ್ಡಿನಲ್ಲಿ ಪ್ರತಿ ಮನೆಗೂ 10 ಕೆ.ಜಿ.ಯಂತೆ ಬದನೆಕಾಯಿ ಎಲೆಕೋಸು, ಸೌತೇಕಾಯಿ, ಸೋರೆಕಾಯಿ, ಟೊಮೆಟೋ, ವಿವಿಧ ಬಗೆಯ 8 ಸಾವಿರ ಕೆ.ಜಿ.ಯ ತರಕಾರಿಗಳನ್ನು ಎಪಿಎಂಸಿ ವರ್ತಕ ನಿರಂಜನ್‌ ಉಚಿತವಾಗಿ ವಿತರಿಸಿದರು.

Advertisement

ಎಪಿಎಂಸಿ ವರ್ತಕ ನಿರಂಜನ್‌ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಜನರಿಗೆ ದವಸ, ಧಾನ್ಯ, ತರಕಾರಿ ಜೀವನಕ್ಕೆ ತುಂಬಾ ಬಹುಮುಖ್ಯ. ಹೀಗಾಗಿ 9ನೇ ವಾರ್ಡಿನಲ್ಲಿ ನಗರಸಭಾ ಸದಸ್ಯರ ಸಮ್ಮುಖದಲ್ಲಿ ಸಾಕಷ್ಟು ಮನೆಗಳಿಗೆ ತಲಾ 8 ಕೆ.ಜಿ.ಯಂತೆ ಹಂಚಿದ್ದೇವೆಂದರು. ಜಿಪಂ ಸದಸ್ಯ ರಾದ ಮುನೇಗೌಡ ಮಾತನಾಡಿ, 9ನೇ ವಾರ್ಡಿನ ನಗರಸಭಾ ಸದಸ್ಯ ಆರ್‌.ಮಟಮಪ್ಪ, ಬಡಾವಣೆ ಹಿರಿಯ ನಾಗರಿಕರಾದ ಪೆಟ್ರೋಲ್‌ ಬಂಕ್‌ ಭಾಸ್ಕರ್‌, ಗುಪ್ತ, ಪಾಟೀಲ್‌ ನಾರಾಯಣ ಸ್ವಾಮಿ, ಟೀವಿ ಚಂದ್ರಶೇಖರ್‌, ಸೋಮ ಶೇಖರ್‌, ಸುರೇಶ್‌, ಚಿಕ್ಕಬೈರಪ್ಪ, ಇಸ್ರೇಲ್‌ ನಾರಾಯಣಸ್ವಾಮಿ, ಶಶಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next