Advertisement

ಮೊಟ್ಟೆ ಎಸೆದಿರುವುದನ್ನು ಒಪ್ಪಲಾಗದು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

05:06 PM Aug 19, 2022 | Team Udayavani |

ಹುಬ್ಬಳ್ಳಿ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಾಹನ ಮೇಲೆ ಮೊಟ್ಟೆ ಎಸೆದಿರುವುದನ್ನು ಒಪ್ಪಲಾಗದು.ಅದೇ ರೀತಿ ಸಿದ್ದರಾಮಯ್ಯ ಅವರು ಸಾರ್ವಕರ್ ಅವರ ಬಗ್ಗೆ ನೀಡಿದ ಹೇಳಿಕೆಯೂ ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವಾಹನ ಮೇಲೆ ಮೊಟ್ಟೆ ಎಸೆದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಖಂಡಿಸಿದ್ದಾರೆ. ನಾನು ಕೂಡ ತೀವ್ರವಾಗಿ ಖಂಡಿಸುತ್ತೇನೆ. ವೈಚಾರಿಕ ಭಿನ್ನಾಭಿಪ್ರಾಯ ಏನೇ ಇರಲಿ ಯಾರು ಲಕ್ಷ್ಮಣ ರೇಖೆ ದಾಟಬಾರದು, ಹಿಂಸಾಮಾರ್ಗ ಹಿಡಿಯಬಾರದು.ಇಂತಹ ಸಂಸ್ಕೃತಿ ಸಹಿಸಲಾಗದು. ಬಿಜೆಪಿ ಒಪ್ಪುವುದಿಲ್ಲ ಎಂದರು.

ಸಾರ್ವಕರ್ ಬಗ್ಗೆ ಹಗುರವಾಗಿ ಮಾತನಾಡುವ ಬದಲು ಸಿದ್ದರಾಮಯ್ಯ ಅವರು ಅವರದ್ದೇ ಪಕ್ಷದ ನಾಯಕಿ ಇಂದಿರಾಗಾಂಧಿ ಅವರು ಬರೆದ ಪತ್ರವಾದರು ಓದಲಿ, ಅವರ ದೇಶಭಕ್ತಿ ಬಗ್ಗೆ ತಿಳಿದುಕೊಳ್ಳಲಿ.ಮತ ತುಷ್ಠೀಕರಣಕ್ಕಾಗಿ ಸಿದ್ದರಾಮಯ್ಯ ಸಂಘ, ಸಂಘನಾಯಕರ ಬಗ್ಗೆ ಹಗುರವಾಗಿ ಹೇಳಿಕೆ ನೀಡುತ್ತಿದ್ದಾರೆ . ದೇಶದ ಎಲ್ಲ ಕಡೆ ಕಾಂಗ್ರೆಸ್ ಜನರಿಂದ ತಿರಸ್ಕರಿಸಲ್ಪಟ್ಟಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಹಗಲುಗನಸು ಕಾಂಗ್ರೆಸ್ಸಿಗರದಾಗಿದೆ. ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.

ಬೇಜವಾಬ್ದಾರಿ ಹೇಳಿಕೆಬೇಡ
ರಾಯಚೂರು ಜಿಲ್ಲೆ ತೆಲಂಗಾಣ ಸೇರಲು ಸಜ್ಜಾಗಿದೆ ಎಂಬ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರ ಹೇಳಿಕೆ ಬೇಜವಾಬ್ದಾರಿ ಹೇಳಿಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.ಜವಾಬ್ದಾರಿ ಸ್ಥಾನದಲ್ಲಿರುವ ಕೆಸಿಆರ್, ಒಕ್ಕೂಟ ವ್ಯವಸ್ಥೆ , ಭಾಷಾ ಬಾಂಧವ್ಯ ಕ್ಕೆ ಧಕ್ಕೆ ತರುವ ಯತ್ನ ಸಿಎಂ ಸ್ಥಾನದಲ್ಲಿದ್ದವರು ಮಾಡುವುದು ಸರಿಯಲ್ಲ.ನಮ್ಮದೇ ಪಕ್ಷ ರಾಯಚೂರು ಶಾಸಕರು ವರ್ಷದ ಹಿಂದೆ ಲಘು ದಾಟಿಯಲ್ಲಿ ಹೇಳಿದ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಸಿಎಂ ಸ್ಥಾನದಲ್ಲಿದ್ದವರು ಗಂಭೀರ ರೀತಿಯ ಹೇಳಿಕೆ ಸರಿಯಲ್ಲ.
ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ ಅವರ ಹೇಳಿಕೆಯನ್ನು ಆಗಲೇ ಖಂಡಿಸಿದ್ದೆ. ಈಗಲೂ ಹೇಳುವೆ ಸೂಕ್ಷ್ಮ ವಾದ ವಿಚಾರದಲ್ಲಿ ಲಘುವಾದ ಹೇಳಿಕೆ ಬೇಡ ಎಂಬುದು ನನ್ನ ಸಲಹೆಯಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next