Advertisement

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

09:40 PM Apr 20, 2024 | Team Udayavani |

ಧಾರವಾಡ : ನೇಹಾ ಹಿರೇಮಠ್ ಹತ್ಯೆ ಪ್ರಕರಣವು ಲವ್ ಜಿಹಾದ್ ಅಲ್ಲ ಎಂಬುದಾಗಿ ಇವರೇ ಏಕೆ ತೀರ್ಮಾನ ಮಾಡುತ್ತಾರೆ? ನೇಹಾಳ ತಂದೆ ನಿರಂಜನ್ ಅವರ ಮಾತನ್ನು ಕೇಳುವುರದ ಜತೆಗೆ ಅವರ ಅನುಮಾನಗಳನ್ನು ಪರಿಗಣಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಯಾವುದೇ ಕಾರಣಕ್ಕೂ ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ.ಸರಿಯಾಗಿ ಇದರ ಬಗ್ಗೆ ತನಿಖೆಯಾಗಬೇಕು ಅನ್ನುತ್ತಿದ್ದೇವೆ ಅಷ್ಟೇ. ಇದು ಸರಿಯಾಗಿ ತನಿಖೆ ಆಗಬೇಕು. ಇಲ್ಲದೇ ಹೋದರೆ ಬಿಜೆಪಿ ಇದರ ವಿರುದ್ಧ ದೊಡ್ಡಮಟ್ಟದ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.

ಮುಸಲ್ಮಾನರು ಅಪರಾಧ ಮಾಡಿದರೆ ಅದು ಅಪರಾಧ ಅಲ್ಲವೇ? ನೇಹಾಳ ತಂದೆಯೇ ಪಾಲಿಕೆಯ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಈ ಸರಕಾರ ಸಹಜ ಪ್ರತಿಕ್ರಿಯೆ ನೀಡುವುದನ್ನು ಬಂದ್ ಮಾಡಬೇಕು. ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಬೇಕು. ನೇಹಾಳ ತಂದೆ ಇದರ ಹಿಂದೆ ಬಹಳ ಜನ ಇದ್ದು, ಆಕೆಯನ್ನು ಮತಾಂತರ ಮಾಡುವ ಪ್ರಯತ್ನ ನಡೆದಿತ್ತು ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ಇದರ ಬಗ್ಗೆ ತನಿಖೆ ಮಾಡಬೇಕು ಎಂದರು.

ಇದು ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯ ಒಂದು ಪರಿಣಾಮವಷ್ಟೇ. ಈ ಹಿಂದೆ ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡಾಗ ಸಿಲಿಂಡರ್ ಬ್ಲಾಸ್ಟ ಎಂದಿದ್ದರು. ಉಡುಪಿಯ ಕಾಲೇಜು ಶೌಚಾಲಯದಲ್ಲಿ ಕೆಮರಾ ಇಟ್ಟ ವಿಚಾರಕ್ಕೆ ಇದು ಮಕ್ಕಳ ಆಟ. ಶಿವಮೊಗ್ಗದಲ್ಲಿ ಈದ್ ಮಿಲಾದ್‌ನಲ್ಲಿ ದೊಡ್ಡ ಖಡ್ಗ ಇಟ್ಟಿದ್ದಕ್ಕೆ ಸ್ಥಳೀಯ ಕಾರಣ ಎಂಬುದಾಗಿ ಸಹಜ ಉತ್ತರವನ್ನು ಸಿಎಂ ಕೊಟ್ಟಿದ್ದರು. ಪಾಕಿಸ್ಥಾನ್ ಜಿಂದಾಬಾದ್ ಕೂಗಿದಾಗ ಹಾಗೇ ಯಾರೂ ಕೂಗೇ ಇಲ್ಲ ಎಂದು ಪ್ರತಿಪಾದಿಸಿದ್ದರು. ಭಯೋತ್ಪಾದಕ ಚಟುವಟಿಕೆ ಮಾಡಿದವರನ್ನು ನಮ್ಮ ಬ್ರದರ್ಸ್ ಎಂದವರು ಹನುಮಾನ್ ಚಾಲೀಸ್ ಪ್ರಕರಣ ಹಾಗೂ ಜೈ ಶ್ರೀರಾಮ ಎಂದವರನ್ನು ಬೆದರಿಸಿದ್ದರು. ಆದರೂ ಯಾವುದೇ ಕ್ರಮ ಸರಕಾರದಿಂದ ಆಗಲಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸರಿ ಇಲ್ಲ. ಮತ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ. ನೇಹಾ ವಿಷಯದಲ್ಲೂ ಇದೇ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಎಂದರು.

ನೇಹಾ ಹತ್ಯೆ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಉಡಾಫೆ ಉತ್ತರ ನೀಡಿದ್ದಾರೆ. ಇಂತಹ ಪ್ರಕರಣ ನಿಮ್ಮ ಮನೆ ಹಾಗೂ ಇನ್ನಿತರ ಸಚಿವರ ಮನೆಯಲ್ಲಿ ನಡೆದಿದ್ದರೆ ಸುಮ್ಮನಿರುತ್ತಿದ್ದಿರಾ?ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಗೃಹ ಸಚಿವರು ಬಹಳ ಸಹಜವಾಗಿ ಮಾತನಾಡಿದ್ದಾರೆ. ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೇ ಮಾತನಾಡಿದ್ದಾರೆ. ಆ ಮೂಲಕ ಇವರು ನೇಹಾ ಕುಟುಂಬ ಮತ್ತು ಸಮಾಜಕ್ಕೆ ಘೋರ ಅನ್ಯಾಯ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next