Advertisement

Lok Sabha Polls ಬಿಜೆಪಿ ಅಧ್ಯಕ್ಷ ನಡ್ಡಾ ಇಂದು ಹುಬ್ಬಳ್ಳಿಗೆ

12:14 AM Apr 21, 2024 | Team Udayavani |

ಹುಬ್ಬಳ್ಳಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಎ. 21ರಂದು ನಗರಕ್ಕೆ ಆಗಮಿಸಲಿದ್ದಾರೆ. ಮಹಾರಾಷ್ಟ್ರದ ಜಲಗಾಂವ್‌ನಿಂದ ವಿಶೇಷ ವಿಮಾನದ ಮೂಲಕ ನಗರಕ್ಕೆ ಮಧ್ಯಾಹ್ನ 2.25 ಗಂಟೆ ಸುಮಾರಿಗೆ ಆಗಮಿಸಲಿದ್ದಾರೆ.

Advertisement

ಮಧ್ಯಾಹ್ನ 3 ಗಂಟೆಗೆ ಗೋಕುಲ ರಸ್ತೆಯ ಡೆನಿಸನ್ಸ್‌ ಹೊಟೇಲ್‌ನಲ್ಲಿ ಬಿಜೆಪಿ ಪ್ರಮುಖರೊಂದಿಗೆ ಮೊದಲ ಸುತ್ತಿನ ಸಭೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಸಮಯ ಕಾದಿರಿಸಲಾಗಿದ್ದು, ಈ ವೇಳೆ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಬಳಿಕ ವಿದ್ಯಾನಗರದ ಸಾಖರೆ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿಯ ಬೃಹತ್‌ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸಹಿತ ಈ ಭಾಗದ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.

ಸಂಜೆ 6.30ರಿಂದ 10 ಗಂಟೆವರೆಗೆ ಡೆನಿಸನ್ಸ್‌ ಹೊಟೇಲ್‌ನಲ್ಲಿ ಪಕ್ಷದ ಪ್ರಮುಖರು, ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next