Advertisement

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

12:53 AM Apr 20, 2024 | Team Udayavani |

ಉಡುಪಿ: ಬಿಜೆಪಿ ಮೈತ್ರಿಕೂಟದ 27 ಸಂಸದರು ರಾಜ್ಯಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಲಿಲ್ಲ. ಭೀಕರ ಬರ ಪರಿಸ್ಥಿತಿಯಲ್ಲೂ ಪರಿಹಾರ ನೀಡಿಲ್ಲ. ಇದೀಗ ಮತ ಕೇಳಲು ಬಂದಿದ್ದಾರೆ. ಇವರೆಲ್ಲರೂ ದಪ್ಪ ಚರ್ಮದವರು, ಗೋರ್ಕಲ್ಲಿನ ಮೇಲೆ ಮಳೆ ಸುರಿದಂತೆ ಇವರ ವರ್ತನೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಟೀಕಿಸಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ನಯಾಪೈಸೆ ಅನುದಾನ ನೀಡಿಲ್ಲ. ಸಂಸದರೂ ಅನುದಾನ ಕೊಡಿಸಲು ಪ್ರಯತ್ನಿಸಿಲ್ಲ. ವಾರ್ಷಿಕವಾಗಿ 4 ಲಕ್ಷ ಕೋಟಿ ರೂ. ತೆರಿಗೆಯನ್ನು ಕರ್ನಾಟಕದಿಂದ ಕೇಂದ್ರಕ್ಕೆ ನೀಡುತ್ತಿದ್ದು, ನಮಗೆ ಮರಳಿ 50 ಸಾವಿರ ಕೋಟಿ ರೂ. ನೀಡುತ್ತಿದೆ ಎಂದು ಆರೋಪಿಸಿದರು.

ಹಲವು ಟೀಕೆಗಳ ಹೊರ ತಾಗಿಯೂ ಕಾಂಗ್ರೆಸ್‌ 5 ಗ್ಯಾರಂಟಿ ಜಾರಿ ಮಾಡಿದೆ. ಯಾವುದೇ ಇಲಾಖೆಗೂ ಆರ್ಥಿಕ ಹೊರೆ ಆಗಿಲ್ಲ. ಅದಾನಿ, ಅಂಬಾನಿಗೆ ಕೊಡಲು ಇವರ ಬಳಿ ಹಣವಿದೆ, ಬಡವರಿಗೆ ಕೊಡಲು ಹಣವಿಲ್ಲ ಎಂದು ಟೀಕಿಸಿದ ಅವರು, ಬಿಜೆಪಿ ನಾಯಕರು ಯಾವ ಮುಖ ಹೊತ್ತು ಮತ ಯಾಚಿಸುತ್ತಿದ್ದಾರೆ? ರಾಜ್ಯ ಸರಕಾರದ ಗ್ಯಾರಂಟಿಗಳಿಂದ ಜನರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ. ರಾಜ್ಯದಲ್ಲಿ ಬರಗಾಲ ಇದ್ದರೂ ಕಾಂಗ್ರೆಸ್‌ ಸರಕಾರ ಬಡವರಿಗೆ ಯಾವುದೇ ಸಮಸ್ಯೆ ಮಾಡಿಲ್ಲ ಮತ್ತು ಯಾವ ಯೋಜನೆಯನ್ನು ನಿಲ್ಲಿಸಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮತ್ತಿತರರು ಉಪಸ್ಥಿತರಿದ್ದರು.

ಸಿಎಂಗೆ ಹೈಕಮಾಂಡ್‌ ಬೆಂಬಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥರಿದ್ದು ಭ್ರಷ್ಟಾಚಾರರಹಿತ ಆಡಳಿತ ನೀಡುತ್ತಿದ್ದಾರೆ. ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಊಹಾ ಪೋಹ ಹೇಳಿಕೆ ಗೆ ಉತ್ತರಿಸಲಾರೆ. ಸಿದ್ದರಾ ಮಯ್ಯ ಅವರಿಗೆ ಹೈಕಮಾಂಡ್‌ ಬೆಂಬಲ ವಿದ್ದು, ರಾಜ್ಯದ ಎಲ್ಲ ಕ್ಷೇತ್ರಗಳನ್ನೂ ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ ಎಂದರು ಜಾರ್ಜ್‌.

Advertisement

ವಿದ್ಯುತ್‌ ಕೊರತೆ ಇಲ್ಲ
ತೀವ್ರ ಬರಗಾಲವಿದ್ದರೂ ವಿದ್ಯುತ್‌ ಕಡಿತಗೊಳಿಸದೇ ಬೇರೆಡೆಯಿಂದ ವಿದ್ಯುತ್‌ ಖರೀದಿಸಿ ಪೂರೈಸ ಲಾಗುತ್ತಿದೆ. 3000 ಮೆ.ವ್ಯಾಟ್‌ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಕ್ರಮ ವಹಿಸಲಾಗಿದೆ. ಮಂಗಳೂರಿನಲ್ಲಿ ಗ್ರೀನ್‌ ಹೈಡ್ರೋ ಜನ್‌ ಯೋಜನೆಯ ಅನುಷ್ಠಾನಕ್ಕೂ ಸಿದ್ಧತೆ ನಡೆಸುತ್ತಿದ್ದೇವೆ ಎಂದರು ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next