Advertisement
ಎಗ್ ಪೆಪ್ಪರ್ ಫ್ರೈಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆ-4, ಕಾಳು ಮೆಣಸು(ಪೆಪ್ಪರ್)-1ಚಮಚ, ಕೊತ್ತಂಬರಿ(ಧನಿಯಾ)-1ಚಮಚ, ಜೀರಿಗೆ ಅರ್ಧ ಚಮಚ, ಚಕ್ಕೆ-1, ಲವಂಗ-3, ಏಲಕ್ಕಿ-1, ಒಣಮೆಣಸು-1, ಶುಂಠಿ ಪೇಸ್ಟ್-1ಚಮಚ, ಈರುಳ್ಳಿ-2, ಕರಿಬೇವಿನ ಎಲೆ-ಸ್ವಲ್ಪ, ಟೊಮೆಟೋ-1, ಕೊತ್ತ,ಬರಿ ಸೊಪ್ಪು-ಸ್ವಲ್ಪ, ಎಣ್ಣೆ-6 ಚಮಚ, ಅಚ್ಚ ಖಾರದ ಪುಡಿ-1ಚಮಚ, ಅರಿಶಿನ ಪುಡಿ-ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಒಂದು ಪಾತ್ರೆಗೆ 4ಮೊಟ್ಟೆಯನ್ನು ಹಾಕಿ ಸ್ವಲ್ಪ ಉಪ್ಪು ಮತ್ತು ನೀರನ್ನು ಸೇರಿಸಿ ಬೇಯಿಸಿಕೊಳ್ಳಿ. ನಂತರ ಮೊಟ್ಟೆಯನ್ನು ಎರಡು ಭಾಗ ಮಾಡಿ ಕಟ್ ಮಾಡಿಇಟ್ಟುಕೊಳ್ಳಿ. ಬಳಿಕ ಒಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಪೆಪ್ಪರ್, ಕೊತ್ತಂಬರಿ, ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ ಮತ್ತು ಒಣಮೆಣಸನ್ನು ಹಾಕಿ ಹುರಿಯಿರಿ. ನಂತರ ಒಂದು ಮಿಕ್ಸ್ ಜಾರಿಗೆ ಹಾಕಿ ಪುಡಿ ಮಾಡಿಇಟ್ಟುಕೊಳ್ಳಿ. ತದನಂತರ ಮತ್ತೂಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಕಾದಮೇಲೆ ಅಚ್ಚ ಖಾರದ ಪುಡಿ, ಅರಿಶಿನ ಪುಡಿ, ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿ ಕಟ್ ಮಾಡಿದ್ದ ಮೊಟ್ಟೆಯನ್ನು ಹಾಕಿ ಒಂದು ನಿಮಿಷಗಳ ಕಾಲ ಎರಡು ಬದಿ ಫ್ರೈ ಮಾಡಿಕೊಳ್ಳಿ. ಬಳಿಕ ಒಂದು ಪ್ಯಾನ್‌ಗೆ ಎರಡು ಚಮಚ ಎಣ್ಣೆ ಹಾಕಿ ಶುಂಠಿ ಪೇಸ್ಟ್, ಈರುಳ್ಳಿ, ಕರಿಬೇವಿನ ಎಲೆ ಹಾಕಿ, ಈರುಳ್ಳಿ ಕಂದು ಬಣ್ಣ ಬರುವರೆಗೆ ಹುರಿಯಿರಿ ಅದಕ್ಕೆ ಟೊಮೆಟೋ , ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಾಡಿಟ್ಟ ಮಸಾಲ ಪುಡಿಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಎರಡು ನಿಮಿಷಗಳವರೆಗೆ ಬೇಯಿಸಿರಿ ಅದಕ್ಕೆ ಫ್ರೈ ಮಾಡಿಟ್ಟ ಮೊಟ್ಟೆಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ನಂತರ ಸಣ್ಣಗೆ ಕಟ್ ಮಾಡಿದ್ದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಎಗ್ ಪೆಪ್ಪರ್ ಫ್ರೈ ತಿನ್ನಲು ಸಿದ್ಧ. ಎಗ್-65
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆ-4(ಬಿಳಿಭಾಗ),ಸಣ್ಣಗೆ ಹೆಚ್ಚಿದ ಹಸಿಮೆಣಸು-1ಚಮಚ, ಬೆಳ್ಳುಳ್ಳಿ-ಶುಂಠಿ ಪೇಸ್ಟ್-2ಚಮಚ, ಗರಂ ಮಸಾಲ ಪುಡಿ-1ಚಮಚ, ಕಡ್ಲೆ ಹಿಟ್ಟು-1ಚಮಚ, ಮೊಟ್ಟೆ-1,ಅಚ್ಚ ಖಾರದ ಪುಡಿ-2ಚಮಚ, ಕರಿಬೇವಿನ ಎಲೆ-ಸ್ವಲ್ಪ, ಟೊಮೆಟೋ ಸಾಸ್ 2ಚಮಚ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಕರಿಯಲು ಎಣ್ಣೆ ,ರುಚಿಗೆ ತಕ್ಕಷ್ಟು ಉಪ್ಪು.
Related Articles
ಒಂದು ಪಾತ್ರೆಗೆ ಬೇಯಿಸಿ ಸಣ್ಣಗೆ ಕಟ್ ಮಾಡಿದ ಮೊಟ್ಟೆಯ ಬಿಳಿ ತುಂಡುಗಳನ್ನು ಹಾಕಿ ಅದಕ್ಕೆ ಗರಂ ಮಸಾಲ ಪುಡಿ,ಸಣ್ಣಗೆ ಹೆಚ್ಚಿದ ಹಸಿಮೆಣಸು,ಅಚ್ಚ ಖಾರದ ಪುಡಿ, ಮೊಟ್ಟೆ ,ಬೆಳ್ಳುಳ್ಳಿ-ಶುಂಠಿ ಪೇಸ್ಟ್,ಕಡ್ಲೆ ಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ.ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮಾಡಿಟ್ಟ ಎಗ್ ಮಿಶ್ರಣವನ್ನು ಬೊಂಡ ರೀತಿಯಲ್ಲಿ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ತೆಗೆಯಿರಿ.ತದನಂತರ ಮತ್ತೊಂದು ಬಾಣಲೆಗೆ 2ಚಮಚದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಹಸಿಮೆಣಸು,ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಹುರಿಯಿರಿ.ಈ ಫ್ರೈಗೆ ಕಾಯಿಸಿಟ್ಟ ಮೊಟ್ಟೆಯನ್ನು ಸೇರಿಸಿ ಅದಕ್ಕೆ ಟೊಮೆಟೋ ಸಾಸ್,ರುಚಿಗೆ ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿರಿ.ಬಿಸಿ-ಬಿಸಿಯಾದ ಎಗ್-65 ಸವಿಯಲು ಸಿದ್ಧ.
Advertisement
*ಶ್ರೀರಾಮ್ ನಾಯಕ್